×
Ad

ಈಜಲು ಹೋಗಿ ಮೊಸಳೆಗೆ ಆಹಾರವಾದ ಫುಟ್‌ಬಾಲ್‌ ಆಟಗಾರ !

Update: 2023-08-04 21:02 IST

ಗ್ವಾನಾಕಾಸ್ಟ್: ನದಿಯಲ್ಲಿ ಈಜುತ್ತಿದ್ದ ಫುಟ್‌ಬಾಲ್‌ ಆಟಗಾರನನ್ನು ಮೊಸಳೆ ಕೊಂದು ಹಾಕಿರುವ ಭಯಾನಕ ಘಟನೆ ನಡೆದಿದೆ. ಕೋಸ್ಟರಿಕಾದ ಗ್ವಾನಾಕಾಸ್ಟ್ ಪ್ರಾಂತ್ಯದ ರಿಯೊ ಕ್ಯಾನಾಸ್‌ ನಲ್ಲಿ ಈ ಘಟನೆ ನಡೆದಿದೆ.

29 ವರ್ಷದ ಜೀಸಸ್ ಆಲ್ಬರ್ಟೊ ಲೋಪೆಜ್ ಒರ್ಟಿಜ್ ಮೃತ ವ್ಯಕ್ತಿಯಾಗಿದ್ದು, ಲೋಪೆಜ್‌ ರ ಮೃತದೇಹವನ್ನು ಮೊಸಳೆ ಬಾಯಲ್ಲಿ ಕಚ್ಚಿ ಎಳೆದುಕೊಂಡು ಈಜುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಮೊಸಳೆಯನ್ನು ಗುಂಡಿಕ್ಕಿ ಸಾಯಿಸಿದ ಸ್ಥಳೀಯರು ಮೃತದೇಹವನ್ನು ದಡಕ್ಕೆ ತಂದಿದ್ದಾರೆ.

ಜುಲೈ 29 ರಂದು ಈ ಘಟನೆ ನಡೆದಿದ್ದು, ಸ್ಥಳೀಯರು ಮೊಸಳೆಯನ್ನು ಬೆನ್ನಟ್ಟಿ ಹೋಗಿದ್ದರಾದರೂ ಅಷ್ಟಕ್ಕಾಗಲೇ ಲೋಪೆಜ್‌ ಕೊನೆಯುಸಿರೆಳೆದಿದ್ದರು.

ಡಿಪೋರ್ಟಿವೊ ರಿಯೊ ಕ್ಯಾನಾಸ್ ತಂಡದ ಫುಟ್ಬಾಲ್ ಆಟಗಾರರಾಗಿರುವ ಲೋಪೆಜ್ ರಿಗೆ ಎಂಟು ಮತ್ತು ಮೂರು ವರ್ಷದ ಇಬ್ಬರು ಮಕ್ಕಳಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿದ್ದ ಲೋಪೆಜ್‌ ಕುಟುಂಬ ಆಟಗಾರನ ಅಂತ್ಯಕ್ರಿಯೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದು, ಅವರ ಫುಟ್‌ಬಾಲ್ ತಂಡದ ಮ್ಯಾನೇಜರ್ ಲೂಯಿಸ್ ಕಾರ್ಲೋಸ್ ಮಾಂಟೆಸ್ ಅವರು ಲೋಪೆಜ್‌ ಕುಟುಂಬಕ್ಕಾಗಿ ನಿಧಿ ಸಂಗ್ರಹವನ್ನು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News