×
Ad

ಅಮೆರಿಕದ ಹೆದ್ದಾರಿಗೆ ಭಾರತೀಯ ಮೂಲದ ಪೊಲೀಸ್ ಹೆಸರು

Update: 2023-09-05 23:13 IST

Photo: twitter/@JuanAlanisCA

ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 2018ರಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದ ಭಾರತೀಯ ಮೂಲದ ಪೊಲೀಸ್ ಅಧಿಕಾರಿ ರೋನಿಲ್ ಸಿಂಗ್ ಅವರ ಹೆಸರನ್ನು ಅಲ್ಲಿನ ಪ್ರಮುಖ ಹೆದ್ದಾರಿಗೆ ನಾಮಕರಣ ಮಾಡಲಾಗಿದೆ.

ಕರ್ತವ್ಯದಲ್ಲಿದ್ದಾಗ ಅಕ್ರಮ ವಲಸಿಗನ ಗುಂಡೇಟಿಗೆ ರೋನಿಲ್ ಸಿಂಗ್ ಬಲಿಯಾಗಿದ್ದರು. ಇದೀಗ ಕ್ಯಾಲಿಫೋರ್ನಿಯಾ ರಾಜ್ಯದ ನ್ಯೂಮನ್ ನಗರದ ಹೆದ್ದಾರಿ 33ಕ್ಕೆ `ಕಾರ್ಪೊರಲ್ ರೋನಿಲ್ ಸಿಂಗ್ ಸ್ಮಾರಕ ಹೆದ್ದಾರಿ' ಎಂದು ನಾಮಕರಣ ಮಾಡಲಾಗಿದೆ. ನಾಮಫಲಕ ಅನಾವರಣ ಕಾರ್ಯಕ್ರಮ ಸೋಮವಾರ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News