×
Ad

ಬೆಂಕಿ ಆಕಸ್ಮಿಕ: ಮಹಿಳೆ, ಆಕೆಯ 8 ಮಕ್ಕಳು ಮೃತ್ಯು

Update: 2023-12-25 22:46 IST

ಸಾಂದರ್ಭಿಕ ಚಿತ್ರ  

ಪೇಷಾವರ: ವಾಯವ್ಯ ಪಾಕಿಸ್ತಾನದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಮಹಿಳೆ ಹಾಗೂ ಆಕೆಯ 8 ಮಕ್ಕಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಖೈಬರ್ ಪಖ್ತೂಂಕ್ವಾ ಪ್ರಾಂತದ ಅಬೋಟಾಬಾದ್ ಜಿಲ್ಲೆಯ ತಹಾರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಣ್ಣಿನ ಗೋಡೆಯ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯ ಛಾವಣಿ ಕುಸಿದು ಬಿದ್ದಾಗ ಅದರಡಿ ಸಿಲುಕಿದ ಮಹಿಳೆ, ಆಕೆಯ 4 ಪುತ್ರರು ಹಾಗೂ 4 ಪುತ್ರಿಯರು ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಮೃತದೇಹಗಳನ್ನು ಗುರುತಿಸುವುದು ಕಷ್ಟವಾದ ಕಾರಣ ಸಾಮೂಹಿಕ ಸಮಾಧಿಗಳನ್ನು ಸಿದ್ಧಪಡಿಸಲಾಗಿದೆ.

ಬೆಂಕಿ ಪಕ್ಕದ ಮನೆಗಳಿಗೆ ಹರಡದಂತೆ ನಿಯಂತ್ರಿಸಲಾಗಿದ್ದು ಖೈಬರ್ ಪಖ್ತೂಂಕ್ವಾದ ಉಸ್ತುವಾರಿ ಪ್ರಧಾನಿ ಅರ್ಷದ್ ಹುಸೇನ್ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದು ದುರಂತದ ಕಾರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಇದೇ ಕುಟುಂಬದ 10 ಸದಸ್ಯರು ಕಳೆದ ಜುಲೈಯಲ್ಲಿ ಫ್ರಿಜ್ನ ಕಂಪ್ರೆಸರ್ ಸ್ಫೋಟಗೊಂಡು ಮೃತಪಟ್ಟಿದ್ದರು ಎಂದು `ಜಿಯೊ ನ್ಯೂಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News