×
Ad

ಇಸ್ರೇಲ್‍ಗೆ ಟರ್ಕಿಯ ರಹಸ್ಯ ಮಾಹಿತಿ ಪೂರೈಸುತ್ತಿದ್ದ ಆರೋಪ : 7 ಜನರ ಬಂಧನ

Update: 2024-03-05 23:10 IST

ಅಂಕಾರ : ಇಸ್ರೇಲ್‍ನ ಗೂಢಚಾರ ಸಂಸ್ಥೆ ಮೊಸಾದ್‍ಗೆ ರಹಸ್ಯ ಮಾಹಿತಿ ಒದಗಿಸುತ್ತಿದ್ದ ಆರೋಪದಲ್ಲಿ 7 ಮಂದಿಯನ್ನು ಬಂಧಿಸಿರುವುದಾಗಿ ಟರ್ಕಿ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಟರ್ಕಿಯ ಕೆಲವು ಪ್ರಮುಖ ವ್ಯಕ್ತಿಗಳ ಮತ್ತು ಸಂಸ್ಥೆಗಳ ಕುರಿತ ಮಾಹಿತಿಯನ್ನು ಮೊಸಾದ್‍ಗೆ ರವಾನಿಸುತ್ತಿದ್ದ ಶಂಕಿತರನ್ನು ಮಂಗಳವಾರ ಇಸ್ತಾಂಬುಲ್‍ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ದೇಶದ ಗಡಿಯೊಳಗೆ ರಾಷ್ಟ್ರದ್ರೋಹಿ ಕೃತ್ಯ ನಡೆಸಲು ನಾವು ಆಸ್ಪದ ನೀಡುವುದಿಲ್ಲ ಎಂದು ಟರ್ಕಿಯ ಆಂತರಿಕ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News