×
Ad

ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸಲಾಗದು : ಎಸ್‍ಸಿಒ ಶೃಂಗಸಭೆಯಲ್ಲಿ ಅಜಿತ್ ದೋವಲ್

Update: 2024-04-03 23:07 IST

 ಅಜಿತ್ ದೋವಲ್ 

ಅಸ್ತಾನ : ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಯಾವುದೇ ಭಯೋತ್ಪಾದಕ ಕೃತ್ಯವನ್ನು ಯಾರೇ ಮಾಡಿದರೂ, ಯಾವುದೇ ಉದ್ದೇಶಕ್ಕೆ ಮಾಡಿದರೂ ಅದನ್ನು ಸಮರ್ಥಿಸಲಾಗದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಕಝಕ್‍ಸ್ತಾನದ ಅಸ್ತಾನಾದಲ್ಲಿ ಬುಧವಾರ ನಡೆದ ಶಾಂಘೈ ಸಹಕಾರ ಸಂಘಟನೆ(ಎಸ್‍ಸಿಒ)ಯ ಸಭೆಯಲ್ಲಿ ಮಾತನಾಡಿದ ದೋವಲ್, ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿರುವವರನ್ನು ಒಳಗೊಂಡಂತೆ ಭಯೋತ್ಪಾದನೆಯ ಅಪರಾಧಿಗಳ ವಿರುದ್ಧ ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಗಡಿಯಾಚೆಯ ಕಳ್ಳಸಾಗಣೆಗಾಗಿ ಡ್ರೋನ್‍ಗಳು ಸೇರಿದಂತೆ ಭಯೋತ್ಪಾದಕರಿಂದ   ತಂತ್ರಜ್ಞಾನದ ಬಳಕೆಯನ್ನು ಎದುರಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಎಸ್‍ಸಿಒ ವಲಯದಲ್ಲಿ ವಿವಿಧ ಭಯೋತ್ಪಾದಕ ಗುಂಪುಗಳಿಂದ ಎದುರಾಗಿರುವ ನಿರಂತರ ಬೆದರಿಕೆಯ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News