×
Ad

ಅಫ್ಘಾನಿಸ್ತಾನದಲ್ಲಿ ಭೂಕಂಪ: ಮೃತರ ಸಂಖ್ಯೆ 1,411ಕ್ಕೆ ಏರಿಕೆ

Update: 2025-09-02 21:52 IST

PC :  X \ @AJEnglish

ಕಾಬೂಲ್, ಸೆ.2: ಪೂರ್ವ ಅಫ್ಘಾನಿಸ್ತಾನದಲ್ಲಿ ರವಿವಾರ ರಾತ್ರಿ ಸಂಭವಿಸಿದ 6.0 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,411ಕ್ಕೆ ಏರಿಕೆಯಾಗಿದ್ದು 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರು ಮಂಗಳವಾರ ಹೇಳಿದ್ದಾರೆ.

ಈ ಮಧ್ಯೆ, ರವಿವಾರದ ಭೂಕಂಪದ ಆಘಾತದಿಂದ ಜನತೆ ಚೇತರಿಸಿಕೊಳ್ಳುತ್ತಿವಂತೆಯೇ ಮಂಗಳವಾರ ಅದೇ ಪ್ರದೇಶದಲ್ಲಿ ಮತ್ತೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ವಾಯವ್ಯ ಪಾಕಿಸ್ತಾನದಲ್ಲೂ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಪಾಕಿಸ್ತಾನ ಸರಕಾರದ ಮೂಲಗಳು ತಿಳಿಸಿವೆ. ಭೂಕಂಪ ಪೀಡಿತ ಅಫ್ಘಾನಿಸ್ತಾನಕ್ಕೆ ತುರ್ತು ಅಗತ್ಯದ ವಸ್ತುಗಳನ್ನು ಒದಗಿಸುತ್ತಿರುವ ವಿಶ್ವಸಂಸ್ಥೆ ಮತ್ತು ರೆಡ್‍ ಕ್ರಾಸ್‍ ನ ಪ್ರಯತ್ನಗಳಿಗೆ ಬೆಂಬಲವಾಗಿ 1 ದಶಲಕ್ಷ ಪೌಂಡ್ ನೆರವನ್ನು ನೀಡುವುದಾಗಿ ಬ್ರಿಟನ್ ಘೋಷಿಸಿದೆ.

ಭಾರತವು 1,000 ಡೇರೆಗಳನ್ನು ಮತ್ತು 15 ಟನ್‍ ಗಳಷ್ಟು ಆಹಾರಗಳನ್ನು ಅಫ್ಘಾನಿಸ್ತಾನಕ್ಕೆ ರವಾನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News