×
Ad

ಅಫ್ಘಾನಿಸ್ತಾನ ನಂ.1 ಶತ್ರು ಎಂದು ಘೋಷಿಸಿದ ಪಾಕ್ ರಕ್ಷಣಾ ಸಚಿವ : ವರದಿ

Update: 2025-10-10 22:35 IST

ಖವಾಜಾ ಆಸಿಫ್ | Photo Credit : ddnews.gov.in

ಇಸ್ಲಮಾಬಾದ್, ಅ.10: ಅಫ್ಘಾನ್ ಪ್ರಜೆಗಳ ಸಾಮೂಹಿಕ ಗಡೀಪಾರು ಕ್ರಮಗಳನ್ನು ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೆರೆಯ ರಾಷ್ಟ್ರವು ಪಾಕಿಸ್ತಾನದ ನಂ.1 ಶತ್ರು ಎಂದು ಘೋಷಿಸಿರುವುದಾಗಿ ವರದಿಯಾಗಿದೆ.

ಅಫ್ಘಾನ್ ಪ್ರಜೆಗಳು ಪಾಕಿಸ್ತಾನದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅಫ್ಘಾನ್ ತಾಲಿಬಾನ್‍ನ ಕೆಲವು ನಾಯಕರು ತಮ್ಮ ಪತ್ನಿಯರನ್ನು ಪಾಕಿಸ್ತಾನದಲ್ಲಿ ಇರಿಸಿದ್ದು ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ನಂತಹ ಪಾಕ್ ವಿರೋಧಿ ಭಯೋತ್ಪಾದನಾ ಸಂಘಟನೆಗೆ ಆಶ್ರಯ ನೀಡುವ ಮೂಲಕ ಪಾಕಿಸ್ತಾನಕ್ಕೆ ದ್ರೋಹ ಎಸಗುತ್ತಿದ್ದಾರೆ ಎಂದು ಆಸಿಫ್ ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದಲ್ಲಿ ನಿರಾಶ್ರಿತರ ಬೃಹತ್ ಉಪಸ್ಥಿತಿ(ಅವರಲ್ಲಿ ಹೆಚ್ಚಿನವರು ದಾಖಲೆ ಹೊಂದಿಲ್ಲ) ಗಡಿಯಾಚೆಗಿನ ಭಯೋತ್ಪಾದಕ ದಾಳಿಯ ಉಲ್ಬಣಕ್ಕೆ ನೇರವಾಗಿ ಸಂಬಂಧಿಸಿದೆ ಮತ್ತು ಇದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಮರಳಿ ಪಡೆದ 2021ರ ಆಗಸ್ಟ್ ಬಳಿಕ ನಾಟಕೀಯವಾಗಿ ಹೆಚ್ಚಿದೆ ಎಂದು ಆಸಿಫ್ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News