×
Ad

ಅಫ್ಘಾನಿಸ್ತಾನ: ಮಹಿಳೆಯರ ಬ್ಯೂಟಿ ಪಾರ್ಲರ್ ನಿಷೇಧ ಜಾರಿ

Update: 2023-07-26 22:04 IST

ಕಾಬೂಲ್: ಸಾರ್ವಜನಿಕ ಪ್ರತಿಭಟನೆ ಮತ್ತು ವಿಶ್ವಸಂಸ್ಥೆಯ ಕಳವಳದ ನಡುವೆಯೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಬ್ಯೂಟಿ ಪಾರ್ಲರ್ಗಳ ಮೇಲಿನ ನಿಷೇಧವು ಜಾರಿಯಾಗಿದೆ ಎಂದು ಟೋಲೊ ನ್ಯೂಸ್ ವರದಿ ಮಾಡಿದೆ.

ಜುಲೈ 23ರ ಬಳಿಕ ದೇಶದಲ್ಲಿ ಮಹಿಳೆಯರ ಬ್ಯೂಟಿ ಪಾರ್ಲರ್ಗಳು ಕಾರ್ಯಾಚರಿಸಲು ಅವಕಾಶವಿಲ್ಲ ಎಂದು ಜುಲೈ 4ರಂದು ತಾಲಿಬಾನ್ ಘೋಷಿಸಿತ್ತು. `ಬ್ಯೂಟಿ ಪಾರ್ಲರ್ಗಳನ್ನು ಬಲವಂತವಾಗಿ ಮುಚ್ಚುವುದರಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಅಲ್ಲದೆ ಮಹಿಳಾ ಉದ್ಯಮಶೀಲತೆಗೆ ಬೆಂಬಲವನ್ನು ಇದು ನಿರಾಕರಿಸುತ್ತದೆ. ಆದ್ದರಿಂದ ಅಫ್ಘಾನ್ ಆಡಳಿತ ತಕ್ಷಣ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಬೇಕು' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಸಹಾಯಕ ವಕ್ತಾರ ಫರ್ಹಾನ್ ಹಕ್ ಆಗ್ರಹಿಸಿದ್ದಾರೆ.

ಅಫ್ಘಾನ್ನಲ್ಲಿ 12,000ಕ್ಕೂ ಅಧಿಕ ಮಹಿಳಾ ಬ್ಯೂಟಿ ಪಾರ್ಲರ್ಗಳಿದ್ದು ಪ್ರತಿಯೊಂದರಲ್ಲೂ ಸರಾಸರಿ 5 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಕೆಲವು ಮಹಿಳೆಯರ ಆದಾಯದಿಂದಲೇ ಕುಟುಂಬದ ಜೀವನ ಸಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೋಲೊ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News