×
Ad

Iran ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗೆ ಅಮೆರಿಕ, ಇಸ್ರೇಲ್ ಕುಮ್ಮಕ್ಕು: ಖಾಮಿನೈ ಆರೋಪ

Update: 2026-02-03 23:27 IST

ಖಾಮಿನೈ | PC : X \ @khamenei_ir

ಟೆಹರಾನ್, ಫೆ.3: ಇರಾನ್‌ ನಲ್ಲಿ ಭುಗಿಲೆದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಕುಮ್ಮಕ್ಕು ನೀಡಿವೆ ಎಂದು ಇರಾನ್‌ ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಾಮಿನೈ ಅವರು ಸೋಮವಾರ ಆಪಾದಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ನೆರವು ಬರುತ್ತಿದೆ’ ಎಂದು ಘೋಷಿಸುವ ಮೂಲಕ ಪ್ರತಿಭಟನಕಾರರನ್ನು ಪ್ರಚೋದಿಸಿದ್ದರು ಎಂದು ಅವರು ಹೇಳಿದ್ದಾರೆ.

ಬೆಲೆ ಏರಿಕೆ ವಿರುದ್ಧ ಅಂಗಡಿಮಾಲಕರು ಹಾಗೂ ವರ್ತಕರು ನಡೆಸಿದ್ದ ಪ್ರತಿಭಟನೆ ಸಮಂಜಸವಾದುದಾಗಿತ್ತು. ಆದರೆ ಆಡಳಿತದ ಪತನಕ್ಕೆ ಆಗ್ರಹಿಸಿದವರು ದೇಶದ್ರೋಹಿಗಳೆಂದು ಖಾಮಿನೈ ಬಣ್ಣಿಸಿದರು. ಇರಾನ್‌ ನಲ್ಲಿ ಬಂಡಾಯವೆಬ್ಬಿಸುವ ಅಮೆರಿಕ ಹಾಗೂ ಇಸ್ರೇಲ್ ನ ಪ್ರಯತ್ನ ವಿಫಲಗೊಂಡಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News