×
Ad

ಅರೇಬಿಯನ್ ಸಮುದ್ರದಲ್ಲಿ ಇರಾನಿನ ಡ್ರೋನ್ ಹೊಡೆದುರುಳಿಸಿದ ಅಮೆರಿಕ ಸೇನೆ

Update: 2026-02-03 23:33 IST

ಸಾಂದರ್ಭಿಕ ಚಿತ್ರ | PTI

ವಾಷಿಂಗ್ಟನ್/ಅರೇಬಿಯನ್ ಸಮುದ್ರ, ಫೆ.3: ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ‘ಅಬ್ರಹಾಂ ಲಿಂಕನ್’ ವಿಮಾನವಾಹಕ ನೌಕೆಯ ಸಮೀಪಕ್ಕೆ ಬರುತ್ತಿದ್ದ ಇರಾನಿನ ಡ್ರೋನ್ ಅನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇರಾನ್ ನ ‘ಶಹೀದ್–139’ ಮಾದರಿಯ ಡ್ರೋನ್ ನೌಕೆಯ ದಿಕ್ಕಿನಲ್ಲಿ ಹಾರುತ್ತಿದ್ದ ವೇಳೆ ಅಮೆರಿಕದ ಎಫ್–35 ಯುದ್ಧವಿಮಾನ ಅದನ್ನು ನಾಶಪಡಿಸಿತು ಎಂದು ತಿಳಿದು ಬಂದಿದೆ. ಭದ್ರತಾ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಈ ವಾರದ ಕೊನೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ನಡೆಯಲಿರುವ ಹಿನ್ನೆಲೆಯಲ್ಲಿ, ಆ ಪ್ರದೇಶದಲ್ಲಿ ಅಮೆರಿಕ ಸೇನಾ ಬಲವನ್ನು ಹೆಚ್ಚಿಸುತ್ತಿದೆ. ಅದೇ ಸಂದರ್ಭದಲ್ಲಿ ಈ ಘಟನೆ ಸಂಭವಿಸಿರುವುದು ಗಮನಾರ್ಹವಾಗಿದೆ. ಘಟನೆ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News