×
Ad

ಗಾಝಾ ಆಡಳಿತ ಸಮಿತಿಯ ನೂತನ ಲೋಗೋಗೆ ಇಸ್ರೇಲ್ ವಿರೋಧ

Update: 2026-02-03 23:45 IST

Photo : Facebook/ncagaza

ಗಾಝಾ, ಫೆ.2: ಯುದ್ಧನಂತರ ಗಾಝಾದ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಗಾಝಾದ ಫೆಲೆಸ್ತೀನ್ ಆಡಳಿತ ಸಮಿತಿಯು (ಎನ್ಸಿಎಜಿ), ಹಿಂದಿನ ಫೆಲೆಸ್ತೀನ್ ಪ್ರಾಧಿಕಾರದ ಲೋಗೊವನ್ನೇ ಹೋಲುವ ಲೋಗೊವನ್ನು ಮಂಗಳವಾರ ಅನಾವರಣಗೊಳಿಸಿದೆ.

ಗಾಝಾ ರಾಷ್ಟ್ರೀಯ ಆಡಳಿತ ಸಮಿತಿ (ಎನ್ಸಿಎಜಿ) ಕಳೆದ ತಿಂಗಳು ಸ್ಥಾಪನೆಯಾದ ಸಂದರ್ಭ ಫೆಲೆಸ್ತೀನ್ ಧ್ವಜದ ಬಣ್ಣಗಳನ್ನು ಧರಿಸಿರುವ ಪಕ್ಷಿ ಚಿತ್ರವನ್ನೊಳಗೊಂಡ ಲೋಗೊವನ್ನು ಅನಾವರಣಗೊಳಿಸಿತ್ತು. ಆದಾಗ್ಯೂ ಎನ್ಸಿಎಜಿಯು ಇಂದು ಫೆಲೆಸ್ತೀನ್ ಪ್ರಾಧಿಕಾರದ ಲೋಗೋಗೆ ತತ್ಸಮಾನವಾದ ಲೋಗೊವನ್ನು ಪ್ರಕಟಿಸಿದೆ.

ನೂತನ ಲೋಗೋ ತನ್ನ ಬಲಭಾಗದ ಕಡೆ ನೋಡುತ್ತಿರುವ ಮತ್ತು ಎದೆಯಲ್ಲಿ ಫೆಲೆಸ್ತೀನ್ ಧ್ವಜವಿರುವ ಚಿನ್ನದ ಬಣ್ಣದ ಗಿಡುಗನ ಚಿತ್ರವನ್ನು ಹೊಂದಿದೆ.

ಯುದ್ಧೋತ್ತರ ಗಾಝಾದ ಆಡಳಿತದಲ್ಲಿ ಎನ್ಸಿಎಜಿಯ ಪಾತ್ರವನ್ನು ವಿರೋಧಿಸುತ್ತಿರುವ ಇಸ್ರೇಲ್ ಸರ್ಕಾರವು ನೂತನ ಲೋಗೋವನ್ನು ತಿರಸ್ಕರಿಸಿದೆ. ಫೆಲೆಸ್ತೀನ್ ಪ್ರಾಧಿಕಾರದ ಲೋಗೋದ ಬಳಕೆಯನ್ನು ತಾನು ಒಪ್ಪುವುದಿಲ್ಲವೆಂದು ಅದು ಹೇಳಿದೆ.

ಎನ್ಸಿಎಜಿಯು ಇಸ್ರೇಲ್ ನ ಮುಂದಿಟ್ಟಿದ್ದ ಲೋಗೋಗಿಂತ ಸೋಮವಾರ ಸಂಜೆ ಪ್ರಕಟಿಸಿದ ಲೋಗೋ ಸಂಪೂರ್ಣ ವಿಭಿನ್ನವಾಗಿದೆ ಎಂದು ಇಸ್ರೇಲ್ ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

‘‘ಫೆಲೆಸ್ತೀನ್ ಪ್ರಾಧಿಕಾರದ ಸಂಕೇತದ ಬಳಕೆಯನ್ನು ಇಸ್ರೇಲ್ ಒಪ್ಪಿಕೊಳ್ಳುವುದಿಲ್ಲ. ಗಾಝಾದ ಆಡಳಿತದಲ್ಲಿ ಫೆಲೆಸ್ತೀನ್ ಪ್ರಾಧಿಕಾರದ ಪಾತ್ರವಿಲ್ಲ’’ ಎಂದು ಇಸ್ರೇಲ್ ಪ್ರಧಾನಿಯ ಕಾರ್ಯಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News