×
Ad

ಬಲೂಚಿಸ್ತಾನದ ಗ್ವಾದರ್ ನಲ್ಲಿ ನೆಲದ ಕಾರ್ಯಾಚರಣೆ ಸ್ಥಗಿತಗೊಳಿಸಿದ ಚೀನಾ

Update: 2026-02-02 23:11 IST

ಸಾಂದರ್ಭಿಕ ಚಿತ್ರ

ಬೀಜಿಂಗ್: ಬಲೂಚಿಸ್ತಾನದ ಗ್ವಾದರ್ ಸೇರಿದಂತೆ ವಿವಿಧೆಡೆ ಬಲೂಚಿಸ್ತಾನ್ ಪ್ರತ್ಯೇಕತಾವಾದಿ ಗುಂಪು ಬಿಎಲ್‍ಎ ಇತ್ತೀಚೆಗೆ ನಡೆಸಿದ ಸಂಘಟಿತ ದಾಳಿಯ ಬಳಿಕ ಪಾಕಿಸ್ತಾನದ ಆಯಕಟ್ಟಿನ ಬಂದರು ನಗರ ಗ್ವಾದರ್‍ನಲ್ಲಿ ಚೀನಾ ತನ್ನ ನೆಲದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್ 18 ವರದಿ ಮಾಡಿದೆ.

ಗ್ವಾದರ್‍ನಲ್ಲಿ ನಿಯೋಜಿಸಲಾದ ಎಲ್ಲಾ `ಗ್ರೌಂಡ್ ಸ್ಟಾಫ್'ಗಳನ್ನು ವಿಶೇಷ ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದ್ದು ಈ ಪ್ರದೇಶದಲ್ಲಿ ಚೀನಾ ನೇತೃತ್ವದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಚೀನಾಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪಾಕಿಸ್ತಾನದ ಸಿಬ್ಬಂದಿಗಳು ನಿರ್ವಹಿಸಲಿದ್ದು ಚೀನಾದ ತಂಡವು ಬೆಳವಣಿಗೆಗಳನ್ನು ಮೇಲುಸ್ತುವಾರಿ ನಡೆಸುತ್ತವೆ ಮತ್ತು ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ದೂರದಿಂದಲೇ ಪರಿಹರಿಸುತ್ತವೆ ಎಂದು ಇಸ್ಲಮಾಬಾದ್‍ನಲ್ಲಿನ ಚೀನಾದ ರಾಯಭಾರಿ ಕಚೇರಿಯ ಮೂಲಗಳು ಹೇಳಿವೆ.

ತಾನು ಸಿಪಿಇಸಿ(ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ಸಂಬಂಧಿಸಿದ ಯೋಜನೆಗಳಿಂದ ಹಿಂದೆ ಸರಿದಿಲ್ಲ. ಪ್ರಸ್ತುತ ಅಮಾನತು ತಾತ್ಕಾಲಿಕವಾಗಿದೆ, ಆದರೆ ಅದರ ಅವಧಿಯು ಹೊಸ ಭದ್ರತಾ ಕ್ರಮಗಳು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಅವಲಂಬಿಸಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News