Australiaದಲ್ಲಿ ಗಾಂಧೀಜಿಯ ಕಂಚಿನ ಪ್ರತಿಮೆ ಅಪಹರಣ
Update: 2026-02-03 23:00 IST
ಮೆಲ್ಬೋರ್ನ್, ಫೆ.3: ನಗರದ ರೋವ್ವಿಲ್ಲೆ ಪ್ರದೇಶದಲ್ಲಿರುವ ಆಸ್ಟ್ರೇಲಿಯನ್ ಭಾರತೀಯರ ಸಮುದಾಯ ಕೇಂದ್ರದಲ್ಲಿ ಮಹಾತ್ಮಾ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ಅಪಹರಿಸಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಧೀಜಿಯವರ ಪ್ರತಿಮೆಯ ಕಳ್ಳತನ ಘಟನೆ ಆಸ್ಟ್ರೇಲಿಯಾದ ಭಾರತೀಯ ಸಮುದಾಯದಲ್ಲಿ ವ್ಯಾಪಕ ಕಳವಳಕ್ಕೆ ಕಾರಣವಾಗಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ ಸರ್ಕಾರವು ಈ ಬಗ್ಗೆ ಆಸ್ಟ್ರೇಲಿಯಾದ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದೆ. ಪ್ರತಿಮೆಯನ್ನು ಪತ್ತೆಹಚ್ಚಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಈ ಕೃತ್ಯ ಎಸಗಿದವರನ್ನು ಗುರುತಿಸುವಂತೆ ಆಗ್ರಹಿಸಿದೆ.
ಈ ಕಂಚಿನ ಗಾಂಧೀಜಿ ಪ್ರತಿಮೆಯನ್ನು ಹೊಸದಿಲ್ಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ 2021ರ ನವೆಂಬರ್ 12ರಂದು ಆಸ್ಟ್ರೇಲಿಯಾಗೆ ಉಡುಗೊರೆಯಾಗಿ ನೀಡಿತ್ತು. 2021ರ ನವೆಂಬರ್ 12ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮೊರಿಸನ್ ಅದನ್ನು ಉದ್ಘಾಟಿಸಿದ್ದರು.