ಅಮೆರಿಕ, ಇಸ್ರೇಲ್ ವಿರುದ್ಧ ಪರಿಣಾಮಕಾರಿ ಕ್ರಮ ಜಾರಿ: ಭದ್ರತಾ ಮಂಡಳಿಯಲ್ಲಿ ಇರಾನ್ ಆಗ್ರಹ
Update: 2025-06-23 22:47 IST
PC : PTI
ವಿಶ್ವಸಂಸ್ಥೆ : ಅಮೆರಿಕ, ಇಸ್ರೇಲಿ ಆಕ್ರಮಣಕಾರರ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ತಕ್ಷಣವೇ ಪರಿಣಾಮಕಾರೀ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ಇಸ್ರೇಲಿನ ಪರಮಾಣು ಸೌಲಭ್ಯಗಳನ್ನು ಐಎಇಎ ಸುರಕ್ಷತೆಗಳ ಅಡಿಯಲ್ಲಿ ಇರಿಸಬೇಕು ಎಂದು ಇರಾನ್ ಆಗ್ರಹಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಇರಾನಿನ ರಾಯಭಾರಿ ಅಮೀರ್ ಸಯೀದ್ ಇರಾವಾನಿ `ಇದು ಭದ್ರತಾ ಮಂಡಳಿಗೆ ಮಾತ್ರವಲ್ಲ, ವಿಶ್ವಸಂಸ್ಥೆಗೇ ಐತಿಹಾಸಿಕ ಪರೀಕ್ಷೆಯಾಗಿದೆ. ಈ ನಿರ್ಲಜ್ಜ ಆಕ್ರಮಣವನ್ನು ಖಂಡಿಸಲು ಭದ್ರತಾ ಮಂಡಳಿ ವಿಫಲವಾದರೆ, ಗಾಝಾ ವಿಷಯದಲ್ಲಿ ಭದ್ರತಾ ಮಂಡಳಿ ಮಾಡಿದಂತೆ, ತೊಡಕಿನ ಕಲೆ ಶಾಶ್ವತವಾಗಿ ಅದರ ಆತ್ಮಸಾಕ್ಷಿಯ ಮೇಲೆ ಉಳಿಯುತ್ತದೆ' ಎಂದು ಹೇಳಿದ್ದಾರೆ.