×
Ad

ಅಮೆರಿಕ | ವಿಮಾನ ಪತನ, 5 ಮಂದಿ ಸಾವು

Update: 2024-03-05 23:08 IST

Photo: NDTV 

ವಾಷಿಂಗ್ಟನ್ : ಅಮೆರಿಕದ ಟೆನೆಸ್ಸೀ ರಾಜ್ಯದ ನ್ಯಾಶ್‍ವಿಲ್ಲೆ ನಗರದ ಹೆದ್ದಾರಿ ಪಕ್ಷ ಲಘು ವಿಮಾನವೊಂದು ಪತನಗೊಂಡು 5 ಮಂದಿ ಸಾವನ್ನಪ್ಪಿರುವುದಾಗಿ ನಗರದ ಪೊಲೀಸ್ ಇಲಾಖೆ ಹೇಳಿದೆ.

ಒಂದು ಇಂಜಿನ್‍ನ ಲಘು ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿರುವ ಸಾಧ್ಯತೆಯಿದೆ. ಸೋಮವಾರ ತಡರಾತ್ರಿ ನ್ಯಾಶ್‍ವಿಲ್ಲೆಯ ಜಾನ್‍ಟ್ಯೂನ್ ವಿಮಾನ ನಿಲ್ದಾಣದ ನಿಯಂತ್ರಣ ಕಚೇರಿಗೆ ವಿಮಾನದ ಪೈಲಟ್ ತುರ್ತು ಸಂದೇಶ ರವಾನಿಸಿದ್ದು ಇಂಜಿನ್‍ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷಕ್ಕೆ ಅನುಮತಿ ಕೋರಿದ್ದಾನೆ. ಕೆಲ ಕ್ಷಣದಲ್ಲೇ ವಿಮಾನ ನಿಲ್ದಾಣದ ಹೊರಗಿರುವ ಹೆದ್ದಾರಿಯ ಬಳಿ ವಿಮಾನ ಪತನಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News