×
Ad

ಹೌದಿಗಳ 15 ಡ್ರೋನ್ ಹೊಡೆದುರುಳಿಸಿದ ಅಮೆರಿಕ

Update: 2024-03-09 23:04 IST

ಸಾಂದರ್ಭಿಕ ಚಿತ್ರ | Photo | NDTV

ಸನಾ : ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿ ಹೆಚ್ಚುತ್ತಿರುವಂತೆಯೇ ಶನಿವಾರ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಯೆಮನ್ ಮೂಲದ ಹೌದಿಗಳು ಪ್ರಯೋಗಿಸಿದ 15 ಡ್ರೋನ್ಗಳನ್ನು ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಪಡೆ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.

ಹೌದಿಗಳು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಅಮೆರಿಕದ `ಪ್ರೊಫೆಲ್ ಫಾಚ್ರ್ಯೂನ್' ವಾಣಿಜ್ಯ ನೌಕೆ ಮತ್ತು ಸಮರ ನೌಕೆಗಳ ಮೇಲೆ ಕ್ಷಿಪಣಿಗಳು ಹಾಗೂ 37 ಡ್ರೋನ್ಗಳ ಸರಣಿ ದಾಳಿ ನಡೆಸಿದೆ ಎಂದು ಹೌದಿಗಳ ವಕ್ತಾರರು ಶನಿವಾರ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಅಮೆರಿಕ ಹಾಗೂ ಮಿತ್ರರಾಷ್ಟ್ರ ಪಡೆ ದಾಳಿ ನಡೆಸಿದ್ದು ಸಮುದ್ರಯಾನ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಅಂತರರಾಷ್ಟ್ರೀಯ ಜಲವ್ಯಾಪ್ತಿಯನ್ನು ಸುರಕ್ಷಿತ ವಲಯವನ್ನಾಗಿಸುವುದು ಇದರ ಉದ್ದೇಶವಾಗಿದೆ' ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News