×
Ad

ತಾಂತ್ರಿಕ ಸಮಸ್ಯೆ | ಅಮೆರಿಕನ್ ಏರ್‍ಲೈನ್ಸ್ ಹಾರಾಟ ಸ್ಥಗಿತ

Update: 2024-12-24 21:30 IST

PC : X

ವಾಷಿಂಗ್ಟನ್ : ಅನಿರ್ದಿಷ್ಟ ತಾಂತ್ರಿಕ ಸಮಸ್ಯೆಯಿಂದಾಗಿ ಅಮೆರಿಕನ್ ಏರ್‍ಲೈನ್ಸ್ ನ ಎಲ್ಲಾ ವಿಮಾನಗಳ ಹಾರಾಟವನ್ನೂ ಅಮೆರಿಕದಲ್ಲಿ ಮಂಗಳವಾರ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ವಿಮಾನಗಳ ಹಾರಾಟ ಸ್ಥಗಿತಕ್ಕೆ ಸ್ಪಷ್ಟ ಕಾರಣವನ್ನು ಅಮೆರಿಕನ್ ಏರ್‍ಲೈನ್ಸ್ ಸಂಸ್ಥೆ ನೀಡಿಲ್ಲ. ಇದು ಕ್ರಿಸ್‍ ಮಸ್ ಹಬ್ಬದ ಮುನ್ನಾ ದಿನ ಸಾವಿರಾರು ಪ್ರಯಾಣಿಕರ ಪ್ರಯಾಣದ ಯೋಜನೆಗೆ ಅಡ್ಡಿಪಡಿಸಿದೆ. ವಿವಿಧ ವಿಮಾನ ನಿಲ್ದಾಣಗಳ ರನ್‍ ವೇಗಳಲ್ಲಿ ತಮ್ಮ ವಿಮಾನ ಸ್ಥಗಿತಗೊಂಡಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ಹಂಚಿಕೊಂಡಿದ್ದಾರೆ. ಸಮಸ್ಯೆ ಸರಿಪಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಸಂಸ್ಥೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News