×
Ad

ಅಫ‍್ಘಾನಿಸ್ತಾನದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ

Update: 2023-10-15 13:31 IST

ಸಾಂದರ್ಭಿಕ ಚಿತ್ರ  

ಕಾಬೂಲ್: ರವಿವಾರ ಬೆಳಗ್ಗೆ ಮತ್ತೊಮ್ಮೆ ಅಫ‍್ಘಾನಿಸ್ತಾನದ ನೈರುತ್ಯ ಹೆರಾತ್ ನಗರದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕಾ ಭೌಗೋಳಿಕ ಸಮೀಕ್ಷಾ ಸಂಸ್ಥೆ ಹೇಳಿದೆ ಎಂದು livemint.com ವರದಿ ಮಾಡಿದೆ.

ಕಳೆದ ಹಲವಾರು ದಿನಗಳಿಂದ ಪೂರ್ವ ಹೆರಾತ್ ಪ್ರಾಂತ್ಯದಲ್ಲಿ ಸಂಭವಿಸುತ್ತಿರುವ ಭೂಕಂಪದಲ್ಲಿ ಸುಮಾರು 1,000 ಮಂದಿ ಮೃತಪಟ್ಟಿದ್ದು, ರವಿವಾರ ಕೂಡಾ ಬೆಳಗ್ಗೆ ಜಾಗತಿಕ ಕಾಲಮಾನ 3.36 ಗಂಟೆಗೆ ಹೆರಾತ್ ನಗರದಲ್ಲಿ ಭೂಕಂಪ ಸಂಭವಿಸಿದೆ.

ಸಾವು-ನೋವುಗಳ ಬಗ್ಗೆ ಈವರೆಗೆ ವರದಿಯಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News