×
Ad

ಭಾರತೀಯ ಮೂಲದ ಅಮೆರಿಕನ್ ವಿವಿ ವಿದ್ಯಾರ್ಥಿ ನಿಗೂಢ ಸಾವು

Update: 2024-02-08 00:02 IST

ಒಹಿಯೊ: ಭಾರತೀಯ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಸೋಮವಾರ ಸಂಜೆ ಇಲ್ಲಿನ ಪ್ರಕೃತಿ ಸಂರಕ್ಷಣಾಧಾಮವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಸಮೀರ್ ಕಾಮತ್ ಎಂದು ಗುರುತಿಸಲಾಗಿದೆ. ಅಮೆರಿಕದ ಪೌರತ್ವ ಪಡೆದಿರುವ ಅವರು ಕಳೆದ ವರ್ಷದ ಆಗಸ್ಟ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಅವರು ಡಾಕ್ಟರೇಟ್ ಅಧ್ಯಯನವನ್ನು ನಡೆಸುತ್ತಿದ್ದರು ಎಂದು ವಾರೆನ್ಕೌಂಟಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರ್ಡ್ಯೂ ವಿವಿಯ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿಗಳಲ್ಲಿ ಕಾಮತ್ ಎರಡನೆಯವರಾಗಿದ್ದಾರೆ.

ಕಾಮತ್ ಅವರ ಮೃತದೇಹವು ಸೋಮವಾರ ಕ್ರೋವ್ಸ್ ಗ್ರೋ ಪ್ರಕೃತಿ ಸಂರಕ್ಷಣಾ ಧಾಮದಲ್ಲಿ ಸಂಜೆ 5:00 ಗಂಟೆಯ ವೇಳೆಗೆ ಪತ್ತೆಯಾಗಿತ್ತು. ಕಳೆದ ವಾರ ನೀಲ್ ಆಚಾರ್ಯ ಎಂಬ ಪರ್ಡ್ಯೂ ವಿವಿಯ ಭಾರತೀಯ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News