×
Ad

ಉಕ್ರೇನ್ ನ ಮತ್ತೊಂದು ಪ್ರದೇಶ ರಶ್ಯದ ವಶಕ್ಕೆ : ವರದಿ

Update: 2024-07-28 21:59 IST

ಸಾಂದರ್ಭಿಕ ಚಿತ್ರ | PC : NDTV 

ಮಾಸ್ಕೋ : ಉಕ್ರೇನ್ನ ಡೊನೆಟ್ಸ್ಕ್ ಪ್ರದೇಶದ ಪೊಕ್ರೊವ್ಸ್ಕ್ ಸೆಕ್ಟರ್ನ ಲೊಜುವಾಟ್ಸ್ಕೆ ಪ್ರದೇಶವನ್ನು ತನ್ನ ಪಡೆಗಳು ವಶಕ್ಕೆ ಪಡೆದಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಶನಿವಾರ ಹೇಳಿದೆ.

29 ತಿಂಗಳುಗಳಿಂದ ಮುಂದುವರಿದಿರುವ ಯುದ್ಧದಲ್ಲಿ ಲೊಜುವಾಟ್ಸ್ಕೆ ಪ್ರದೇಶ ತೀವ್ರ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಈ ಪ್ರದೇಶದಲ್ಲಿ ರಶ್ಯನ್ ಪಡೆ ಮುಂದೊತ್ತಿ ಬರುತ್ತಿದೆ ಎಂದು ಉಕ್ರೇನ್ನ ರಕ್ಷಣಾ ಪಡೆಯ ಪ್ರಧಾನ ಕಚೇರಿ ಶನಿವಾರ ಹೇಳಿದೆ, ಆದರೆ ರಶ್ಯನ್ ಪಡೆಗಳ ನಿಯಂತ್ರಣಕ್ಕೆ ಬಂದಿರುವುದನ್ನು ದೃಢಪಡಿಸಿಲ್ಲ.

ಆದರೆ ಲೊಜುವಾಟ್ಸ್ಕೆ ಹಾಗೂ ಇತರ ಎರಡು ಪ್ರದೇಶಗಳು ರಶ್ಯ ಪಡೆಯ ನಿಯಂತ್ರಣಕ್ಕೆ ಬಂದಿರುವುದಾಗಿ ಉಕ್ರೇನ್ನ ಅನಧಿಕೃತ ಮಿಲಿಟರಿ ಬ್ಲಾಗರ್ಗಳು ಹೇಳಿಕೆ ನೀಡಿದ್ದಾರೆ. ರಶ್ಯದ ಪಡೆಗಳು ಪೂರ್ವ ಉಕ್ರೇನ್ನ ಡೊನೆಟ್ಸ್ಕ್ ವಲಯದ ಪ್ರಮುಖ ನಗರವ ಅವ್ದಿವ್ಕಾ ನಗರವನ್ನು ಫೆಬ್ರವರಿಯಲ್ಲಿ ವಶಪಡಿಸಿಕೊಂಡ ಬಳಿಕ ನಿಧಾನವಾಗಿ ಮುಂದುವರಿಯುತ್ತಿವೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News