×
Ad

ಉಕ್ರೇನ್‍ನ ಡೊನೆಟ್ಸ್ಕ್‍ನ ಮತ್ತೊಂದು ಪ್ರದೇಶ ರಶ್ಯದ ವಶಕ್ಕೆ

Update: 2024-08-31 21:41 IST

Photo : NDTV  ಸಾಂದರ್ಭಿಕ ಚಿತ್ರ

ಮಾಸ್ಕೋ: ಪೂರ್ವ ಉಕ್ರೇನ್‍ನ ಡೊನೆಟ್ಸ್ಕ್ ಪ್ರಾಂತದ ಕಿರೋವ್ ಪ್ರದೇಶದ ಮೇಲೆ ರಶ್ಯದ ಪಡೆಗಳು ನಿಯಂತ್ರಣ ಸಾಧಿಸಿವೆ ಎಂದು ರಶ್ಯದ ರಕ್ಷಣಾ ಇಲಾಖೆ ಶನಿವಾರ ಹೇಳಿದೆ.

ಡೊನೆಟ್ಸ್ಕ್ ಪ್ರಾಂತದಲ್ಲಿ ರಶ್ಯದ ಪಡೆ ಮುನ್ನಡೆ ಕಾಯ್ದುಕೊಂಡಿದೆ. ಜತೆಗೆ, ಕಸ್ರ್ಕ್ ಪ್ರದೇಶದಲ್ಲಿ ಉಕ್ರೇನ್‍ನ ಪಡೆಯನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಗಡಿಪ್ರದೇಶದ ಬಳಿಯ ಕೊರೆನೆವೊ ಮತ್ತು ಮಲಯಾಲೊಕ್ನ್ಯಾ ಪ್ರದೇಶದ ಮೇಲೆ ದಾಳಿ ನಡೆಸುವ ಉಕ್ರೇನ್ ಪಡೆಯ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ರಶ್ಯದ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News