×
Ad

ಶ್ರೀಲಂಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಅನುರಾ ಕುಮಾರ್ ದಿಸ್ಸನಾಯಕೆ

Update: 2024-09-23 17:39 IST

ಅನುರಾ ಕುಮಾರ್ ದಿಸ್ಸನಾಯಕೆ |  PC :  X  \ @iamankit78

 

ಕೊಲೊಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಸೋಮವಾರ ಅನುರಾ ಕುಮಾರ್ ದಿಸ್ಸಾನಾಯಕೆ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿಸ್ಸಾನಾಯಕೆ ದೇಶದ ಆರ್ಥಿಕತೆಯನ್ನು ಬಲಪಡಿಸಿ, ಭ್ರಷ್ಟಾಚಾರವನ್ನು ತೊಡೆದು ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಅಧ್ಯಕ್ಷರ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 56 ವರ್ಷದ ಅನುರ ಕುಮಾರ್ ದಿಸ್ಸಾನಾಯಕೆಗೆ ಶ್ರೀಲಂಕಾ ಮುಖ್ಯ ನ್ಯಾಯಮೂರ್ತಿ ಜಯಂತ್ ಜಯಸೂರ್ಯ ಪ್ರಮಾಣ ವಚನ ಬೋಧಿಸಿದರು.

ಶನಿವಾರ ನಡೆದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ ಮೈತ್ರಿಕೂಟದ ಸಜಿತ್ ಪ್ರೇಮದಾಸರನ್ನು ನ್ಯಾಷನಲ್ ಪೀಪಲ್ಸ್ ಪವರ್ ಮೈತ್ರಿಕೂಟದ ಹಾಗೂ ಮಾರ್ಕ್ಸಿಸ್ಡ್ ಜನತಾ ವಿಮುಕ್ತಿ ಪೆರಮುನ ಪಕ್ಷದ ನಾಯಕ ದಿಸ್ಸಾನಾಯಕೆ ಪರಾಭವಗೊಳಿಸಿದ್ದರು.

ಈ ಚುನಾವಣೆಯಲ್ಲಿ ದಿಸ್ಸಾನಾಯಕೆ 105,264 ಪ್ರಥಮ ಪ್ರಾಶಸ್ತ್ರ ಮತದೊಂದಿಗೆ 5.74 ದಶಲಕ್ಷ ಮತ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಪ್ರೇಮದಾಸ 167,867 ಪ್ರಥಮ ಪ್ರಾಶಸ್ತ್ಯದ ಮತದೊಂದಿಗೆ 4.53 ದಶಲಕ್ಷ ಮತಗಳನ್ನಷ್ಟೇ ಗಳಿಸಲು ಶಕ್ತವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News