ಇರಾನ್ ಆಂತರಿಕ ಸಚಿವರ ಬಂಧನಕ್ಕೆ ಇಂಟರ್ಪೋಲ್ ನೆರವು ಕೋರಿದ ಅರ್ಜೆಂಟೀನಾ
Update: 2024-04-24 22:49 IST
Photo Credit: AFP
ಬ್ಯೂನಸ್‍ಐರಿಸ್: ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಇರಾನ್‍ನ ಆಂತರಿಕ ಸಚಿವರ ಬಂಧನಕ್ಕೆ ಅರ್ಜೆಂಟೀನಾ ಇಂಟರ್ಪೋಲ್ ನೆರವು ಕೋರಿದೆ.
1994ರಲ್ಲಿ ಬ್ಯೂನಸ್‍ಐರಿಸ್‍ನ ಯೆಹೂದಿ ಕೇಂದ್ರದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇರಾನ್‍ನ ಆಂತರಿಕ ಸಚಿವ ಅಹ್ಮದ್ ವಹೀದಿಯನ್ನು ಬಂಧಿಸುವಂತೆ ಅರ್ಜೆಂಟೀನಾ ಸರಕಾರ ಪಾಕ್ ಮತ್ತು ಶ್ರೀಲಂಕಾ ಇಂಟರ್ಪೋಲ್‍ಗೆ ಮನವಿ ಮಾಡಿದೆ. ಈ ಸ್ಫೋಟದಲ್ಲಿ 85 ಮಂದಿ ಸಾವನ್ನಪ್ಪಿದ್ದರು. ಈ ಸ್ಫೋಟದಲ್ಲಿ ಇರಾನ್ ಕೈವಾಡವಿದೆ ಎಂದು ಅರ್ಜೆಂಟೀನಾ ಮತ್ತು ಇಸ್ರೇಲ್ ಆರೋಪಿಸಿದ್ದು ಇರಾನ್ ಆರೋಪವನ್ನು ನಿರಾಕರಿಸಿದೆ.
ಅರ್ಜೆಂಟೀನಾ ಕೋರಿಕೆಯಂತೆ ಇರಾನ್ ಸಚಿವರ ಬಂಧನಕ್ಕೆ ಇಂಟರ್ಪೋಲ್ ರೆಡ್ ನೋಟೀಸ್ ಜಾರಿಗೊಳಿಸಿದೆ ಎಂದು ಮೂಲಗಳು ಹೇಳಿವೆ.