×
Ad

ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್ ನ 10 ಪ್ರದೇಶಗಳ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ: ಕನಿಷ್ಠ 11 ಮಂದಿಗೆ ಗಾಯ

Update: 2025-06-22 12:44 IST

Photo credit: PTI

ಜೆರುಸಲೇಮ್ : ಇಂದು ಇರಾನ್ ನಡೆಸಿದ ಕ್ಷಿಪಣಿದಾಳಿಗೆ ಇಸ್ರೇಲ್‌ನಲ್ಲಿ ಕನಿಷ್ಠ 11 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ದಾಳಿಯಲ್ಲಿ ಓರ್ವನಿಗೆ ಗಂಭೀರವಾಗಿ ಗಾಯಗಳಾಗಿದ್ದು, 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮ್ಯಾಗೆನ್ ಡೇವಿಡ್ ಆಡಮ್ ರಾಷ್ಟ್ರೀಯ ತುರ್ತು ಸೇವೆ ಕೇಂದ್ರದ ಮಾಹಿತಿಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಕಾರ್ಮೆಲ್, ಹೈಫಾ, ಟೆಲ್ ಅವಿವ್ ಪ್ರದೇಶ ಸೇರಿದಂತೆ ಇಸ್ರೇಲ್‌ನ 10 ಸ್ಥಳಗಳ ಮೇಲೆ ಇರಾನ್‌ನ ರಾಕೆಟ್‌ಗಳು ಅಪ್ಪಳಿಸಿದೆ ಎಂದು ಇಸ್ರೇಲ್‌ನ ತುರ್ತು ಸೇವೆಗಳ ವಕ್ತಾರರು ತಿಳಿಸಿದ್ದಾರೆ.

ಈ ಮಧ್ಯೆ ಇಸ್ರೇಲ್‌ನ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ಹೇಳಿದೆ.

ಇಸ್ರೇಲ್‌ನ ಸಂಶೋಧನಾ ಕೇಂದ್ರಗಳು, ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News