ಜೈಲಿನಲ್ಲಿ ಹದಗೆಟ್ಟ ಇಮ್ರಾನ್‍ಖಾನ್ ಆರೋಗ್ಯ : ವರದಿ
Update: 2026-01-27 20:28 IST
ಇಮ್ರಾನ್‍ಖಾನ್ | Photo Credit : PTI
ಲಾಹೋರ್, ಜ.27: ಅಡಿಯಾಲಾ ಜೈಲಿನಲ್ಲಿ ಏಕಾಂತ ಬಂಧನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು ಕಣ್ಣಿನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿರುವುದಾಗಿ ಸಿಎನ್‍ಎನ್-ನ್ಯೂಸ್18 ವರದಿ ಮಾಡಿದೆ.
ಖಾನ್ ಅವರನ್ನು 2025ರ ಡಿಸೆಂಬರ್ 2ರಿಂದ ಪ್ರತ್ಯೇಕವಾಗಿ ಇರಿಸಲಾಗಿದ್ದು ಸುಮಾರು 55 ದಿನಗಳಿಂದ ಕುಟುಂಬದ ಸದಸ್ಯರು ಅಥವಾ ವಕೀಲರೊಂದಿಗೆ ಸಂಪರ್ಕಕ್ಕೆ ಅವಕಾಶ ನೀಡಲಾಗಿಲ್ಲ. ಇಮ್ರಾನ್ ಅವರು ಪ್ರಸ್ತುತ ತೀವ್ರ ಕಣ್ಣಿನ ಸೋಂಕು ಮತ್ತು ಅಲರ್ಜಿಯಿಂದ ಬಳಲುತ್ತಿದ್ದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ದೃಷ್ಠಿ ಕುಂಠಿತಗೊಳ್ಳುವ ಅಪಾಯವಿದೆ ಎಂದು ಪಾಕಿಸ್ತಾನ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್(ಪಿಐಎಂಎಸ್)ನ ವೈದ್ಯಕೀಯ ತಂಡ ಸೂಚಿಸಿದೆ ಎಂದು ವರದಿಯು ಹೇಳಿದೆ.