×
Ad

ಬಲೂಚಿಸ್ತಾನ | 7 ಕಾರ್ಮಿಕರ ಹತ್ಯೆ

Update: 2024-09-29 21:16 IST

ಸಾಂದರ್ಭಿಕ ಚಿತ್ರ

ಪೇಷಾವರ : ನೈಋತ್ಯ ಪಾಕಿಸ್ತಾನದ ಪ್ರಕ್ಷುಬ್ಧ ಪ್ರಾಂತ ಬಲೂಚಿಸ್ತಾನದಲ್ಲಿ ಕಾರ್ಮಿಕರು ವಾಸಿಸುತ್ತಿದ್ದ ಮನೆಗೆ ನುಗ್ಗಿದ ಬಂದೂಕುಧಾರಿಗಳು ಕನಿಷ್ಠ 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ಪಂಜ್‍ಗರ್ ನಗರದ ಖುದಾಯಿ ಅಬದಾನ್ ಪ್ರದೇಶದಲ್ಲಿ ಮನೆಯೊಂದರ ನಿರ್ಮಾಣ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಪಂಜಾಬ್ ಪ್ರಾಂತದ ಮುಲ್ತಾನ್ ಜಿಲ್ಲೆಯ ನಿವಾಸಿಗಳಾದ ಕಾರ್ಮಿಕರು ದಿನದ ದುಡಿಮೆ ಮುಗಿಸಿ ಮನೆಯೊಳಗೆ ನಿದ್ರಿಸುತ್ತಿದ್ದರು. ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿದ್ದ ದಾಳಿಕೋರರು ಮನೆಯ ಆವರಣಕ್ಕೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. 7 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ `ಡಾನ್' ಪತ್ರಿಕೆ ವರದಿ ಮಾಡಿದೆ.

ಇದು ಭಯೋತ್ಪಾದಕ ದಾಳಿಯಾಗಿದೆ. ಇದುವರೆಗೆ ಯಾರೂ ದಾಳಿಯ ಹೊಣೆ ವಹಿಸಿಕೊಂಡಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News