×
Ad

ನೈಜೀರಿಯಾ | 50 ಮಂದಿಯನ್ನು ಅಪಹರಿಸಿದ ಡಕಾಯಿತರು

Update: 2025-08-03 20:44 IST

Photo credit : REUTERS

ಅಬುಜಾ: ವಿಶ್ವ ಸಂಸ್ಥೆಗಾಗಿ ತಯಾರಿಸಲಾಗಿರುವ ಖಾಸಗಿ ಸಂಘರ್ಷ ನಿಗಾವಣೆ ವರದಿಯ ಪ್ರಕಾರ, ಸಾಮೂಹಿಕ ಅಪಹರಣ ಘಟನೆಯೊಂದರಲ್ಲಿ ವಾಯುವ್ಯ ನೈಜೀರಿಯಾದಿಂದ ಬಂದೂಕುಧಾರಿಗಳು 50 ಮಂದಿಯನ್ನು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ.

ಸಶಸ್ತ್ರ ಡಕಾಯಿತರು ಶುಕ್ರವಾರ ಝಂಫಾರ ರಾಜ್ಯದ ಸಾಬೋನ್ ಗ್ಯಾರಿನ್ ಡಾಮ್ರಿಯ ಗ್ರಾಮವೊಂದನ್ನು ಗುರಿಯಾಗಿಸಿಕೊಂಡು ಈ ಕೃತ್ಯವೆಸಗಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಗ್ರಾಮೀಣ ಒಳನಾಡಿನಲ್ಲಿ ವಾಸಿಸುತ್ತಿರುವ ಈ ಪ್ರಾಂತ್ಯದ ಮೇಲೆ ಇತ್ತೀಚಿನ ಈ ದಾಳಿ ನಡೆದಿದ್ದು, ಈ ಪ್ರಾಂತ್ಯ ಈ ಹಿಂದಿನಿಂದಲೂ ಒತ್ತೆ ಹಣಕ್ಕಾಗಿ ಅಪಹರಣ ನಡೆಸುವ, ಗ್ರಾಮಗಳನ್ನು ಲೂಟಿ ಮಾಡುವ ಹಾಗೂ ತೆರಿಗೆಗಾಗಿ ಒತ್ತಾಯಿಸುವ ಗುಂಪುಗಳಿಂದ ಬಾಧಿತವಾಗಿವೆ ಎನ್ನಲಾಗಿದೆ.

“ಈ ವರ್ಷದಲ್ಲಿ ಬಕುರಾ ಸ್ಥಳೀಯ ಸರಕಾರ ಪ್ರದೇಶದಲ್ಲಿ ನಡೆದಿರುವ ಪ್ರಪ್ರಥಮ ಸಾಮೂಹಿಕ ಅಪಹರಣ ಘಟನೆ ಇದಾಗಿದ್ದು, ಝಂಫಾರಾದಲ್ಲಿನ ಇತ್ತೀಚಿನ ಸಾಮೂಹಿಕ ವಶ ಪ್ರವೃತ್ತಿ ಕಳವಳಕಾರಿಯಾಗಿದೆ ಹಾಗೂ ಡಕಾಯಿತರ ಕಾರ್ಯತಂತ್ರಗಳು ಉತ್ತರ ಝಂಫಾರದ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸುವತ್ತ ಬದಲಾವಣೆಗೊಂಡಿವೆ” ಎಂಬುದರತ್ತ ಈ ವರದಿ ಬೊಟ್ಟು ಮಾಡಿದೆ.

ಆದರೆ, ಈ ಕುರಿತು ಪ್ರತಿಕ್ರಿಯಿಸಲು ಝಂಫಾರ ಪೊಲೀಸ್ ವಕ್ತಾರರು ನಿರಾಕರಿಸಿದ್ದಾರೆ.

ನೈಜೀರಿಯಾದ ಡಕಾಯಿತಿ ಬಿಕ್ಕಟ್ಟು ಪಶುಪಾಲಕರು ಹಾಗೂ ರೈತರ ನಡುವಿನ ಭೂಮಿ ಮತ್ತು ನೀರಿನ ಮೇಲಿನ ಹಕ್ಕಿನಿಂದುಂಟಾಗಿರುವ ಸಂಘರ್ಷವಾಗಿದೆ. ಇದೀಗ ಸಂಘಟಿತ ಅಪರಾಧ ಸ್ವರೂಪಕ್ಕೆ ತಿರುಗಿದ್ದು, ದೀರ್ಘಕಾಲದಿಂದ ಸ್ವಲ್ಪ ಮಟ್ಟಿನ ಆಡಳಿತದ ಅಸ್ತಿತ್ವವಿರುವ ಅಥವಾ ಇಲ್ಲವೇ ಇಲ್ಲದ ಗ್ರಾಮೀಣ ಸಮುದಾಯಗಳನ್ನು ಈ ಗುಂಪುಗಳು ಗುರಿಯಾಗಿಸಿಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News