×
Ad

ಬಾಂಗ್ಲಾ: ಮುಂದುವರಿದ `ಆಪರೇಷನ್ ಡೆವಿಲ್ ಹಂಟ್'; 1,300ಕ್ಕೂ ಅಧಿಕ ಮಂದಿಯ ಬಂಧನ

Update: 2025-02-10 19:57 IST

Photo Credit | PTI

ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಉಚ್ಛಾಟಿತ ಆಡಳಿತದ ಜತೆ ಸಂಪರ್ಕ ಹೊಂದಿರುವ ಗ್ಯಾಂಗ್‍ ಗಳು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಬಳಿಕ, ಬಾಂಗ್ಲಾದೇಶವು ರವಿವಾರ ಆರಂಭಿಸಿದ್ದ ಬೃಹತ್ ಭದ್ರತಾ ಕಾರ್ಯಾಚರಣೆ `ಆಪರೇಷನ್ ಡೆವಿಲ್ ಹಂಟ್'ನಡಿ ಇದುವರೆಗೆ 1,300ಕ್ಕೂ ಅಧಿಕ ಮಂದಿಯನ್ನು ಬಾಂಗ್ಲಾದೇಶದ ಭದ್ರತಾ ಪಡೆ ಬಂಧಿಸಿರುವುದಾಗಿ ವರದಿಯಾಗಿದೆ.

`ಕಿತ್ತೊಗೆಯಲಾದ ನಿರಂಕುಶ ಪ್ರಭುತ್ವ'ದ ಜತೆ ಸಂಬಂಧ ಹೊಂದಿದ ಗ್ಯಾಂಗ್‍ಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಬಳಿಕ ಕಾರ್ಯಾಚರಣೆ ಆರಂಭಗೊಂಡಿದೆ .ಕಾರ್ಯಾಚರಣೆಗೆ ಆಪರೇಷನ್ ಡೆವಿಲ್ ಹಂಟ್' (ಸೈತಾನ ಬೇಟೆ ಕಾರ್ಯಾಚರಣೆ) ಎಂದು ಹೆಸರಿಸಲಾಗಿದ್ದು, ಸೈತಾನರನ್ನು ಬೇರುಸಹಿತ ಕಿತ್ತೊಗೆಯುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬಾಂಗ್ಲಾ ಮಧ್ಯಂತರ ಸರಕಾರದ ಆಂತರಿಕ ಸಚಿವಾಲಯದ ಮುಖ್ಯಸ್ಥರು ಹೇಳಿದ್ದಾರೆ.

ಆಪರೇಷನ್ ಡೆವಿಲ್ ಹಂಟ್‍ಗೆ ಶನಿವಾರ ಚಾಲನೆ ದೊರೆತ ಬಳಿಕ 24 ಗಂಟೆಯಲ್ಲೇ ಸೇನಾ ತುಕಡಿಗಳು, ಪೊಲೀಸರು ಹಾಗೂ ವಿಶೇಷ ಪೊಲೀಸ್ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಮೆಟ್ರೊಪಾಲಿಟನ್ ನಗರಗಳಲ್ಲೇ 274 ಮಂದಿಯನ್ನು ಬಂಧಿಸಲಾಗಿತ್ತು. ದೇಶವನ್ನು ಅಸ್ಥಿರಗೊಳಿಸಲು, ಕಾನೂನನ್ನು ಭಂಗಗೊಳಿಸಲು ಹತಾಶ ಪ್ರಯತ್ನ ನಡೆಸುತ್ತಿರುವವರನ್ನು ಹಾಗೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಯುತ್ತಿದೆ.

ಘಟನೆಗಳಿಗೆ ಹೊಣೆಯಾಗಿರುವ ಹಲವರನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ತಲೆತಪ್ಪಿಸಿಕೊಂಡವರನ್ನು ಪತ್ತೆಹಚ್ಚಿ ಗರಿಷ್ಠ ಶಿಕ್ಷೆ ವಿಧಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಲಹೆಗಾರ ಲೆ|ಜ| (ನಿವೃತ್ತ) ಜಹಾಂಗೀರ್ ಆಲಮ್ ಚೌಧುರಿ ಹೇಳಿದ್ದಾರೆ. ಈ ಮಧ್ಯೆ, ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನಿಗಾ ಇರಿಸಲು ಕಮಾಂಡ್ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯ ಸಲಹೆಗಾರರ ಮಾಧ್ಯಮ ಕಾರ್ಯದರ್ಶಿ ಶಫೀಕುಲ್ ಆಲಮ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News