ಬಾಂಗ್ಲಾದೇಶದಲ್ಲಿ ಮಹಿಳೆಯ ಅತ್ಯಾಚಾರ: ವರದಿ
ಸಾಂದರ್ಭಿಕ ಚಿತ್ರ | Photo Credit : freepik
ಢಾಕಾ, ಜ.5: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ನಡೆಸಿ, ಆಕೆಯನ್ನು ಮರಕ್ಕೆ ಕಟ್ಟಿಹಾಕಿದ ಬಳಿಕ ಆಕೆಯ ತಲೆಕೂದಲು ಕತ್ತರಿಸಿದ ಘಟನೆ ವರದಿಯಾಗಿದೆ.
ಮಧ್ಯ ಬಾಂಗ್ಲಾದೇಶದ ಕಾಲಿಗಂಜ್‍ನಲ್ಲಿ ಘಟನೆ ನಡೆದಿದೆ. `ಶಾಹಿನ್ ಮತ್ತು ಆತನ ಸಹೋದರನಿಂದ ಜಮೀನು ಮತ್ತು ಮನೆಯನ್ನು ಖರೀದಿಸಿದ್ದು ಆ ಬಳಿಕ ಶಾಹಿನ್ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಶನಿವಾರ ಸಂಜೆ ತನ್ನ ಗ್ರಾಮದ ಇಬ್ಬರು ಸಂಬಂಧಿಕರು ಮನೆಗೆ ಆಗಮಿಸಿದ್ದಾಗ ಶಾಹಿನ್ ಮತ್ತು ಆತನ ಸಹಚರ ಹಸನ್ ಮನೆಗೆ ಬಲವಂತವಾಗಿ ನುಗ್ಗಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ 50,000 ಟಾಕಾ ಹಣ ನೀಡಲು ಆಗ್ರಹಿಸಿದ್ದು ನಿರಾಕರಿಸಿದಾಗ ಮರಕ್ಕೆ ಕಟ್ಟಿಹಾಕಿ ತಲೆಕೂದಲು ಕತ್ತರಿಸಿದ್ದು ಇದನ್ನು ಮೊಬೈಲ್‍ನಲ್ಲಿ ಚಿತ್ರಿಸಿಕೊಂಡಿದ್ದು ಆನ್‍ಲೈನ್‍ನಲ್ಲಿ ಪ್ರಸಾರ ಮಾಡಿದ್ದಾರೆ. ಬಳಿಕ ಸ್ಥಳೀಯರು ತನ್ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು 40 ವರ್ಷದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.