×
Ad

ಬಾಂಗ್ಲಾ: ಸುಪ್ರೀಂಕೋರ್ಟ್ ಸಿಜೆ ರಾಜೀನಾಮೆ

Update: 2024-08-11 09:08 IST

Bangladesh Chief Justice Obaidul Hassan (telegraphindia.com file Photo)

ಢಾಕಾ, ಆ.10: ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದಿರುವ ಬಾಂಗ್ಲಾದೇಶದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶ(ಸಿಜೆ) ಉಬೈದುಲ್ ಹಸನ್ ರಾಜೀನಾಮೆ ನೀಡಲು ಒಪ್ಪಿದ್ದಾರೆ ಎಂದು ಸ್ಥಳೀಯ ಟಿವಿ ವಾಹಿನಿ ಶನಿವಾರ ವರದಿ ಮಾಡಿದೆ.

ಕಳೆದ ವರ್ಷ ಸಿಜೆ ಆಗಿ ನೇಮಕಗೊಂಡಿದ್ದ ಹಸನ್, ಹಸೀನಾ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿರೋಧಿಗಳನ್ನು ಗಲ್ಲಿಗೇರಿಸುವ ಆದೇಶ ನೀಡಿದ್ದ ಯುದ್ಧಾಪರಾಧಗಳ ನ್ಯಾಯಮಂಡಳಿಯ ಮೇಲುಸ್ತುವಾರಿ ವಹಿಸಿದ್ದರು. ಶನಿವಾರ ಢಾಕಾದಲ್ಲಿ ಸುಪ್ರೀಂಕೋರ್ಟ್ಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಸಿಜೆ ಹಾಗೂ ಇತರ ನ್ಯಾಯಾಧೀಶರು ಮಧ್ಯಾಹ್ನ 1 ಗಂಟೆಯೊಳಗೆ ರಾಜೀನಾಮೆ ನೀಡಲು ಗಡು ವಿಧಿಸಿದ್ದರು. ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಜತೆ ಸಮಾಲೋಚಿಸಿದ ಬಳಿಕ ಸಿಜೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು 'ದಿ ಢಾಕಾ ಟ್ರಿಬ್ಯೂನಲ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News