×
Ad

ಬಾಂಗ್ಲಾದೇಶ: ಜಮಾಅತೆ ಇಸ್ಲಾಮಿ ಪಕ್ಷದ ಮೇಲಿನ ನಿಷೇಧ ತೆರವು

Update: 2024-08-28 20:55 IST

   ಸಾಂದರ್ಭಿಕ ಚಿತ್ರ 

 

ಢಾಕಾ: ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿ ಪಕ್ಷ ಹಾಗೂ ಅದರ ವಿದ್ಯಾರ್ಥಿ ಘಟಕ ʼಬಾಂಗ್ಲಾದೇಶ್ ಇಸ್ಲಾಮಿ ಛಾತ್ರ ಶಿಬಿರ್' ಮೇಲೆ ಈ ಹಿಂದಿನ ಶೇಖ್ ಹಸೀನಾ ಸರಕಾರ ವಿಧಿಸಿದ್ದ ನಿಷೇಧವನ್ನು ಮಧ್ಯಂತರ ಸರಕಾರ ತೆರವುಗೊಳಿಸಿದೆ.

ಜಮಾಅತೆ ಇಸ್ಲಾಮಿ ಪಕ್ಷ ಹಾಗೂ ಅದರ ಎಲ್ಲಾ ಅಂಗ ಸಂಸ್ಥೆಗಳ ಮೇಲಿನ ನಿಷೇಧವನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಅಧಿಸೂಚನೆಯನ್ನು ಗೃಹ ಸಚಿವಾಲಯ ಗಝೆಟ್‍ನಲ್ಲಿ ಪ್ರಕಟಿಸಿದೆ. `ಜಮಾಅತೆ ಇಸ್ಲಾಮಿ ಮತ್ತು ಅದರ ಅಂಗಸಂಸ್ಥೆಗಳು ಭಯೋತ್ಪಾದಕ ಕೃತ್ಯ ಮತ್ತು ಹಿಂಸಾಚಾರದಲ್ಲಿ ಪಾಲ್ಗೊಂಡಿರುವುದಕ್ಕೆ ಯಾವುದೇ ಪುರಾವೆ ಲಭಿಸಿಲ್ಲ. ಪಕ್ಷ ಹಾಗೂ ಅದರ ಅಂಗಸಂಸ್ಥೆಗಳು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂದು ಮಧ್ಯಂತರ ಸರಕಾರ ನಂಬುತ್ತದೆ. ಆದ್ದರಿಂದ ನಿಷೇಧ ತೆರವುಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಜಮಾಅತೆ ಇಸ್ಲಾಮಿ ಪಕ್ಷ ಹಾಗೂ ಅದರ ಅಂಗಸಂಸ್ಥೆಗಳು ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ್ದ ಹಸೀನಾ ಸರಕಾರ ಆಗಸ್ಟ್ 1ರಂದು ನಿಷೇಧ ಜಾರಿಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News