×
Ad

ಬಾಂಗ್ಲಾದೇಶ | ಇಸ್ಕಾನ್ ನಿಷೇಧ ಕೋರಿ ಹೈಕೋರ್ಟ್‍ಗೆ ಅರ್ಜಿ

Update: 2024-11-27 21:36 IST

ಚಿನ್ಮೋಯ್ ಕೃಷ್ಣ ದಾಸ್ | PC : indiatoday.in

ಢಾಕ : ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯವನ್ನು ಗುರಿಯಾಗಿಸಿದ ಹಿಂಸಾಚಾರ ಉಲ್ಬಣಿಸಿರುವ ನಡುವೆಯೇ ಇಸ್ಕಾನ್ ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶದ ಹೈಕೋರ್ಟ್‍ಗೆ ಬುಧವಾರ ಅರ್ಜಿ ಸಲ್ಲಿಸಲಾಗಿದೆ.

ಜತೆಗೆ, ಹಿಂಸಾಚಾರ ಹೆಚ್ಚಿರುವ ಚಿತ್ತಗಾಂಗ್ ಮತ್ತು ರಂಗ್‍ಪುರದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಆದೇಶಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್, ಇಸ್ಕಾನ್‍ನ ಇತ್ತೀಚಿನ ಚಟುವಟಿಕೆಯ ಬಗ್ಗೆ ಬಾಂಗ್ಲಾದೇಶ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬ ಬಗ್ಗೆ ಗುರುವಾರ ಮಾಹಿತಿ ನೀಡುವಂತೆ ಅಟಾರ್ನಿ ಜನರಲ್‍ಗೆ ಸೂಚಿಸಿದೆ ಎಂದು `ದಿ ಡೈಲಿ ಸ್ಟಾರ್' ವರದಿ ಮಾಡಿದೆ. ಇಸ್ಕಾನ್ ಬಗ್ಗೆ ಎರಡು ದಿನಪತ್ರಿಕೆಗಳ ವರದಿಯನ್ನು ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದ ಬಳಿಕ ಪರಿಸ್ಥಿತಿಯ ನಿಯಂತ್ರಣಕ್ಕೆ ತಕ್ಷಣ ಕ್ರಮಗಳನ್ನು ಕೈಗೊಳ್ಳುವಂತೆ ಹೈಕೋರ್ಟ್ ಸರಕಾರಕ್ಕೆ ಸೂಚಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News