ಬೆನಿನ್ | ದಂಗೆ ವಿಫಲವಾಗಿದೆ: ಆಂತರಿಕ ಸಚಿವರ ಹೇಳಿಕೆ
Update: 2025-12-15 23:41 IST
photo: bbc
ಪೋರ್ಟೋ ನೊವೊ, ಡಿ.15: ಬೆನಿನ್ ನಲ್ಲಿ ಘೋಷಿಸಲಾದ ದಂಗೆಯನ್ನು ವಿಫಲಗೊಳಿಸಲಾಗಿದೆ ಎಂದು ಆಂತರಿಕ ಸಚಿವ ಅಲಾಸೆನ್ ಸೆಯಿದೊವ್ `ಫೇಸ್‍ಬುಕ್'ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.
ಸೈನಿಕರ ಒಂದು ಸಣ್ಣ ಗುಂಪು ರಾಷ್ಟ್ರ ಮತ್ತು ಅದರ ಸಂಸ್ಥೆಗಳನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ರವಿವಾರ ಬೆಳಿಗ್ಗೆ ದಂಗೆಯನ್ನು ಪ್ರಾರಂಭಿಸಿತು. ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ ಸಶಸ್ತ್ರ ಪಡೆಗಳು ಮತ್ತು ಅದರ ಮುಖ್ಯಸ್ಥರು ದೇಶಕ್ಕೆ ತಮ್ಮ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ' ಎಂದವರು ಪೋಸ್ಟ್ ಮಾಡಿದ್ದಾರೆ. ಎಲ್ಲವೂ ಚೆನ್ನಾಗಿದೆ. ಯಾವುದೇ ಸಮಸ್ಯೆಯಿಲ್ಲ ಎಂದು ಸರಕಾರದ ವಕ್ತಾರ ವಿಲ್ಫ್ರೆಡ್ ಹೌಂಗ್‍ಬೆಡ್ಜಿ ಹೇಳಿರುವುದಾಹಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಫ್ರಾನ್ಸ್ ನಿಂದ 1960ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಬೆನಿನ್ ಹಲವು ದಂಗೆಗಳಿಗೆ ಸಾಕ್ಷಿಯಾಗಿದೆ.