×
Ad

ಫೆಲೆಸ್ತೀನ್ ಅಧ್ಯಕ್ಷರನ್ನು ಭೇಟಿಯಾದ ಬ್ಲಿಂಕೆನ್

Update: 2023-11-05 23:47 IST

ರಮಲ್ಲಾ, ನ.5: ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಗೆ ರವಿವಾರ ಅನಿರೀಕ್ಷಿತ ಭೇಟಿ ನೀಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಫೆಲೆಸ್ತೀನಿಯನ್ ಮೂಲಗಳು ಮಾಹಿತಿ ನೀಡಿವೆ.

ಶುಕ್ರವಾರ ಜೋರ್ಡನ್‌ಗೆ ಭೇಟಿ ನೀಡಿದ್ದ ಬ್ಲಿಂಕೆನ್ ರವಿವಾರ ಪಶ್ಚಿಮದಂಡೆಗೆ ನೀಡಿರುವ ಅನಿರೀಕ್ಷಿತ ಭೇಟಿ ಕುತೂಹಲ ಮೂಡಿಸಿದೆ. ಗಾಝಾ ಪಟ್ಟಿಯಲ್ಲಿ ಫೆಲೆಸ್ತೀನ್ ಆಡಳಿತ ನಡೆಸಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಕಳೆದ ವಾರ ಅಮೆರಿಕ ಹೇಳಿಕೆ ನೀಡಿತ್ತು. ಗಾಝಾದಲ್ಲಿ ನಾವು ನಡೆಸುತ್ತಿರುವ ಯುದ್ಧ ಹಮಾಸ್ ವಿರುದ್ಧ, ಫೆಲೆಸ್ತೀನಿಯರ ವಿರುದ್ಧವಲ್ಲ ಎಂದು ಇಸ್ರೇಲ್ ಕೂಡಾ ಹೇಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News