×
Ad

ಲೈವ್ ಪ್ರದರ್ಶನದ ವೇಳೆ ವೇದಿಕೆಯ ಮೇಲೆ ಕುಸಿದು ಬಿದ್ದು ಗಾಯಕ ಸಾವು

Update: 2023-12-15 17:16 IST

Screengrab:X/@JonelessHomes

ಬ್ರೆಸಿಲಿಯಾ: 30 ವರ್ಷದ ಬ್ರೆಝಿಲಿಯನ್ ಗಾಸ್ಪೆಲ್ ಗಾಯಕ ಪೆಡ್ರೊ ಹೆನ್ರಿಕ್ ಅವರು ಫೀರಾ ಡಿ ಸಂತಾನಾ ನಗರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಲೈವ್ ಪ್ರದರ್ಶನ ನೀಡುತ್ತಿರುವಾಗಲೇ ವೇದಿಕೆಯ ಮೇಲೆ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಪ್ರದರ್ಶನದ ವೇಳೆ ಇದ್ದಕ್ಕಿದ್ದಂತೆ, ತನ್ನ ಸಮತೋಲನವನ್ನು ಕಳೆದುಕೊಂಡು ಕುಸಿದು ಬಿದ್ದ ಗಾಯಕನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಅವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News