×
Ad

ಬ್ರಿಟನ್: ವೈದ್ಯರ ಮುಷ್ಕರ

Update: 2023-07-13 23:52 IST

Photo: NDTV

ಲಂಡನ್: ಬ್ರಿಟನ್ ನ ರಾಷ್ಟ್ರೀಯ ಆರೋಗ್ಯ ಸೇವೆಯ ವೈದ್ಯರು ಗುರುವಾರ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದು ದೇಶದ ಆರೋಗ್ಯಕ್ಷೇತ್ರದ ಇತಿಹಾಸದಲ್ಲೇ ಇದು ವೈದ್ಯರ ಬೃಹತ್ ಮುಷ್ಕರವಾಗಿದ್ದು ರೋಗಿಗಳ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಗುರುವಾರ(ಜುಲೈ 13) ಆರಂಭಗೊಂಡಿರುವ ಐದು ದಿನದ ಮುಷ್ಕರ ಮಂಗಳವಾರದವರೆಗೆ ಮುಂದುವರಿಯಲಿದೆ ಎಂದು ವೈದ್ಯರ ಸಂಘಟನೆ ಘೋಷಿಸಿದೆ. ಇದುವರೆಗೆ ನಾವು ಸದ್ಭಾವನೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದೆವು. ಆದರೆ ಈಗ ಬದಲಾವಣೆಯ ಅಗತ್ಯವಿದೆ.

ಹಲವು ವೈದ್ಯರು ವಿದೇಶಕ್ಕೆ ತೆರಳುವ ನಿರ್ಧಾರ ಮಾಡಿದ್ದಾರೆ. ತಾವು ಈ ದೇಶಕ್ಕೆ ಸೀಮಿತವಾಗಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕೆಲಸ ನಿರ್ವಹಿಸಬಹುದು ಎಂಬುದು ವೈದ್ಯರಿಗೆ ಮನವರಿಕೆಯಾಗಿದೆ ಎಂದು ವೈದ್ಯರ ಸಂಘಟನೆ ಹೇಳಿದೆ. ನರ್ಸ್ಗಳು, ಆ್ಯಂಬುಲೆನ್ಸ್ ಸಿಬ್ಬಂದಿ ಹಾಗೂ ವೈದ್ಯಕೀಯ ಕ್ಷೇತ್ರದ ಇತರ ಸಿಬ್ಬಂದಿಯೂ ಇತ್ತೀಚಿನ ದಿನಗಳಲ್ಲಿ ಮುಷ್ಕರಕ್ಕೆ ಕೈಜೋಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News