ಉಕ್ರೇನ್ ನಲ್ಲಿ ಬ್ರಿಟನ್ ಮಿಲಿಟರಿ ನೆಲೆ: ರಶ್ಯ ಕಳವಳ
Update: 2025-01-17 22:20 IST
ಸಾಂದರ್ಭಿಕ ಚಿತ್ರ | PC : NDTV
ಮಾಸ್ಕೋ : ಉಕ್ರೇನ್ ಮತ್ತು ಬ್ರಿಟನ್ ನಡುವೆ ಗುರುವಾರ ಘೋಷಣೆಯಾಗಿರುವ ಹೊಸ ಒಪ್ಪಂದದಡಿ ಉಕ್ರೇನ್ನಲ್ಲಿ ಬ್ರಿಟನ್ನ ಮಿಲಿಟರಿ ನೆಲೆ ಸ್ಥಾಪನೆಯಾಗುವ ಬಗ್ಗೆ ರಶ್ಯ ಕಳವಳ ವ್ಯಕ್ತಪಡಿಸಿದೆ.
ಗುರುವಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮತ್ತು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ 100 ವರ್ಷಗಳಾವಧಿಯ ಹೊಸ ಒಪ್ಪಂದವನ್ನು ಘೋಷಿಸಿದ್ದರು. `ಬ್ರಿಟನ್ ನೇಟೊ ದೇಶವಾಗಿರುವುದರಿಂದ ನಮ್ಮ ಗಡಿಭಾಗದವರೆಗೆ ಅದರ ಮಿಲಿಟರಿ ವ್ಯವಸ್ಥೆ ವಿಸ್ತಾರಗೊಳ್ಳುವುದರಿಂದ ನಮ್ಮ ಭದ್ರತೆಗೆ ಆತಂಕ ಎದುರಾಗಲಿದೆ' ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.