×
Ad

ಬೇಹುಗಾರಿಕೆ ಆರೋಪ | ಬ್ರಿಟನ್ ರಾಜತಾಂತ್ರಿಕ ರಶ್ಯದಿಂದ ಉಚ್ಛಾಟನೆ

Update: 2024-11-26 22:04 IST

PC : NDTV

ಮಾಸ್ಕೋ : ಬೇಹುಗಾರಿಕೆ ಆರೋಪದಲ್ಲಿ ಬ್ರಿಟನ್‌ ನ ರಾಜತಾಂತ್ರಿಕನನ್ನು ದೇಶದಿಂದ ಹೊರ ಹಾಕುವುದಾಗಿ ರಶ್ಯ ಮಂಗಳವಾರ ಹೇಳಿದೆ.

ಮಾಸ್ಕೋದ ಬ್ರಿಟನ್ ರಾಯಭಾರಿ ಕಚೇರಿಯಲ್ಲಿ ಕಿರಿಯ ರಾಜತಾಂತ್ರಿಕ ಅಧಿಕಾರಿ ಎಡ್ವರ್ಡ್ ವಿಲ್ಕೀಸ್‍ರನ್ನು ನೇಮಿಸಿರುವ ಬಗ್ಗೆ ಬ್ರಿಟನ್ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. ಪ್ರತಿ-ಗುಪ್ತಚರ ಕಾರ್ಯದ ಸಮಯದಲ್ಲಿ ಬ್ರಿಟನ್ ರಾಯಭಾರ ಕಚೇರಿಯಲ್ಲಿ ಅಘೋಷಿತ ಬ್ರಿಟಿಷ್ ಗುಪ್ತಚರ ಉಪಸ್ಥಿತಿಯನ್ನು ಪತ್ತೆಹಚ್ಚಲಾಗಿದೆ ಮತ್ತು ಅವರು ಬೇಹುಗಾರಿಕೆಯಲ್ಲಿ ತೊಡಗಿರುವುದು ದೃಢಪಟ್ಟಿದೆ ಎಂದು ರಶ್ಯದ ಎಫ್‍ಎಸ್‍ಬಿ ಭದ್ರತಾ ಸೇವೆಯ ಮೂಲಗಳನ್ನು ಉಲ್ಲೇಖಿಸಿ ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಘಟನೆಗೆ ಸಂಬಂಧಿಸಿ ಬ್ರಿಟನ್ ರಾಯಭಾರಿಗೆ ಸಮನ್ಸ್ ನೀಡಲಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News