×
Ad

ಬಲ ಕಿವಿಯ ಮೇಲ್ಭಾಗಕ್ಕೆ ಗುಂಡು ತಗುಲಿದೆ: ದಾಳಿ ಬಳಿಕ ಟ್ರಂಪ್ ಹೇಳಿಕೆ

Update: 2024-07-14 08:09 IST

Photo: x.com/sav_says_

ವಾಷಿಂಗ್ಟನ್: ಪೆನ್ಸೆಲ್ವೇನಿಯಾದಲ್ಲಿ  ನಡೆದ ಗುಂಡಿನ ದಾಳಿಯ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ದಾಳಿಯಲ್ಲಿ ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಗುಂಡು ತಗುಲಿದೆ" ಎಂದು ಬಹಿರಂಗಪಡಿಸಿದ್ದಾರೆ.

"ಭಯಾನಕ ಸದ್ದು ಕೇಳಿಸಿದ ತಕ್ಷಣ ಏನೋ ಅವಘಡವಾಗಿದೆ ಎನ್ನುವುದು ನನಗೆ ತಕ್ಷಣ ಗಮನಕ್ಕೆ ಬಂತು. ಚರ್ಮವನ್ನು ಗುಂಡು ಬೇಧಿಸಿದ ಅನುಭವ ಆಯಿತು" ಎಂದು ಟ್ರಂಪ್ ತಮ್ಮ 'ಟ್ರುತ್' ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಟ್ರಂಪ್ ಅವರಿಗೆ ಆಗಿರುವ ಗಾಯ ತೀವ್ರ ಸ್ವರೂಪದ್ದಲ್ಲ ಎಂದು ತಿಳಿದು ಬಂದಿದೆ.

"ನಾನು ಚೆನ್ನಾಗಿದ್ದೇನೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೇನೆ" ಎಂದು ಟ್ರಂಪ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News