×
Ad

ಮೆಕ್ಸಿಕೋದಲ್ಲಿ ಬಸ್ಸು ಅಪಘಾತ: 18 ವಲಸಿಗರ ಮೃತ್ಯು; 27 ಮಂದಿಗೆ ಗಾಯ

Update: 2023-10-07 22:01 IST

Photpcredit : newindianexpress.com

ಮೆಕ್ಸಿಕೋ ಸಿಟಿ : ದಕ್ಷಿಣ ಮೆಕ್ಸಿಕೋದಲ್ಲಿ ಶುಕ್ರವಾರ ಬಸ್ಸೊಂದು ಉರುಳಿಬಿದ್ದು ಕನಿಷ್ಟ 18 ವಲಸಿಗರು ಮೃತಪಟ್ಟಿದ್ದು ಇತರ 27 ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಮೆರಿಕದತ್ತ ಸಾಗುತ್ತಿದ್ದ ವಲಸಿಗರು ತುಂಬಿದ್ದ ಬಸ್ಸು ಒಕ್ಸಾಕ ಮತ್ತು ಪ್ಯುಯೆಬ್ಲ ರಾಜ್ಯಗಳನ್ನು ಸಂಪರ್ಕಿಸುವ ಹೆದ್ದಾರಿಯ ಬಳಿ ಶುಕ್ರವಾರ ಮುಂಜಾನೆ ಮಗುಚಿಬಿದ್ದಿದೆ. ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದು ಇವರು ವೆನೆಝುವೆಲಾ ಮತ್ತು ಹೈಟಿ ಮೂಲದವರು ಎಂದು ಒಕ್ಸಾಕ ರಾಜ್ಯದ ನ್ಯಾಯಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಕನಿಷ್ಟ 18 ಪ್ರಯಾಣಿಕರು ಮೃತಪಟ್ಟಿದ್ದು ಇತರ 27 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಸ್ಸಿನಲ್ಲಿ ಮಿತಿಮೀರಿ ಪ್ರಯಾಣಿಕರು ತುಂಬಿದ್ದರಿಂದ ಪರ್ವತದ ಇಳಿಜಾರು ರಸ್ತೆಯಲ್ಲಿ ರಸ್ತೆ ಪಕ್ಕ ವಾಲಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕನ್-ಮೆಕ್ಸಿಕೊ ಗಡಿಯನ್ನು ತಲುಪುವ ಪ್ರಯತ್ನದಲ್ಲಿ ವಿವಿಧ ದೇಶಗಳ ಸಾವಿರಾರು ವಲಸಿಗರು ಮೆಕ್ಸಿಕೋದಾದ್ಯಂತ ಬಸ್ಸು, ಟ್ರಕ್, ಸರಕು ಸಾಗಣೆ ರೈಲುಗಳ ಮೇಲೆ ಕುಳಿತು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿದ್ದು 2014ರಿಂದ ಇಂತಹ ಪ್ರಯತ್ನದಲ್ಲಿ 8,200ಕ್ಕೂ ಅಧಿಕ ವಲಸಿಗರು ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ವಲಸಿಗರಿಗಾಗಿನ ಅಂತರಾಷ್ಟ್ರೀಯ ಸಂಘಟನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News