×
Ad

ಕ್ಯಾಲಿಫೋರ್ನಿಯ | ಕಟ್ಟಡಕ್ಕೆ ಲಘು ವಿಮಾನ ಡಿಕ್ಕಿ: ಇಬ್ಬರು ಮೃತ್ಯು, 18 ಮಂದಿಗೆ ಗಾಯ

Update: 2025-01-03 16:57 IST
PC : X 

ಲಾಸ್ ಏಂಜಲೀಸ್: ಲಘು ವಿಮಾನವೊಂದು ವಾಣಿಜ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನ ಫುಲ್ಲರ್ಟನ್ ಮುನಿಸಿಪಲ್ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಈ ವಿಮಾನ ನಿಲ್ದಾಣವು ಆಗ್ನೇಯ ಲಾಸ್ ಏಂಜಲೀಸ್ ನಿಂದ 40 ಕಿಮೀ ದೂರವಿದೆ. ಅಪಘಾತದ ಕಾರಣ ಇನ್ನೂ ತಿಳಿದು ಬಂದಿಲ್ಲ.

ಅಪಘಾತದಲ್ಲಿ ಗಾಯಗೊಂಡಿರುವ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನಿತರ ಎಂಟು ಮಂದಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.

ಮೃತಪಟ್ಟವರು ವಿಮಾನದ ಪ್ರಯಾಣಿಕರೊ ಅಥವಾ ವಿಮಾನ ಢಿಕ್ಕಿ ಹೊಡೆದಾಗ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೋ ಎಂಬುದು ತನಿಖಾಧಿಕಾರಿಗಳಿಗೆ ಇನ್ನೂ ತಿಳಿದು ಬಂದಿಲ್ಲ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಿಮಾನ ಢಿಕ್ಕಿ ಹೊಡೆದ ಕಟ್ಟಡದ ಮೇಲ್ಚಾವಣಿಯಲ್ಲಿ ಬೃಹತ್ ಗಾತ್ರದ ರಂಧ್ರವಾಗಿದ್ದು, ಅಲ್ಲಿಂದ ಭಾರಿ ಪ್ರಮಾಣದ ಹೊಗೆ ಹೊರ ಬರುತ್ತಿರುವುದು ವಿಡಿಯೊ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News