×
Ad

Canada| ವ್ಯಾಂಕೋವರ್‌ ಏರ್‌ಪೋರ್ಟ್‌ನಲ್ಲಿ ಮದ್ಯಪಾನ ಮಾಡಿರುವ ಶಂಕೆ: ಏರ್ ಇಂಡಿಯಾ ಪೈಲಟ್ ಬಂಧನ

Update: 2026-01-01 15:57 IST

ವ್ಯಾಂಕೋವರ್,ಜ.1: ಕೆನಡಾದ ವ್ಯಾಂಕೋವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ದಿಲ್ಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಚಲಾಯಿಸಲಿದ್ದ ಪೈಲಟ್ ಒಬ್ಬರನ್ನು ಮದ್ಯಪಾನ ಮಾಡಿದ ಶಂಕೆಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

ವಿಮಾನ ಹತ್ತುವ ಮೊದಲು ಪೈಲಟ್‌ ಬಾಯಿಯಿಂದ ಮದ್ಯದ ವಾಸನೆ ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಯೋರ್ವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೈಲಟ್‌ ಅನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.  ಪರೀಕ್ಷೆಯಲ್ಲಿ ವಿಫಲರಾದ ಕಾರಣ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು.  

ಈ ಘಟನೆ ಬಳಿಕ ಪೈಲಟ್ ‘ಕರ್ತವ್ಯಕ್ಕೆ ಬೇಕಾದ ಫಿಟ್ನೆಸ್’ ಕುರಿತು ಕಳವಳ ವ್ಯಕ್ತಪಡಿಸಿದ ಕೆನಡಾದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News