×
Ad

ಕೆನಡಾ: ಭಾರತ ವಿರೋಧಿ ಪೋಸ್ಟರ್ಗಳಲ್ಲಿ ಅಮಿತ್ ಶಾ, ಜೈಶಂಕರ್ ಫೋಟೊ

Update: 2023-09-01 22:41 IST

 ಅಮಿತ್ ಶಾ, ಜೈಶಂಕರ್ | Photo: PTI 

ಒಟ್ಟಾವ : ಕೆನಡಾದಲ್ಲಿ ಹಿಂದು ದೇವಾಲಯಗಳನ್ನು ವಿರೂಪಗೊಳಿಸುವ ಮತ್ತು ಭಾರತ ವಿರೋಧಿ ಪೋಸ್ಟರ್ ಅಭಿಯಾನ ಮುಂದುವರಿದಿದ್ದು ಬ್ರಿಟಿಷ್ ಕೊಲಂಬಿಯಾ ಪ್ರಾಂತದಲ್ಲಿ ಅಂಟಿಸಲಾದ ಭಾರತ ವಿರೋಧಿ ಪೋಸ್ಟರ್‍ಗಳಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಫೋಟೋದ ಮೇಲ್ಗಡೆ `ವಾಂಟೆಡ್' ಎಂಬ ಬರಹ ಕಂಡುಬಂದಿದೆ ಎಂದು ವರದಿಯಾಗಿದೆ.

ಈ ಪೋಸ್ಟರ್ಗಳು ಹಾಗೂ ಭಾರತ ವಿರೋಧಿ ಅಭಿಯಾನದ ಬಗ್ಗೆ ಭಾರತ ಸರಕಾರ ಕೆನಡಾ ಸರಕಾರಕ್ಕೆ ಅಸಮಾಧಾನ ಸಲ್ಲಿಸಿದ್ದು ಹಲವೆಡೆ ವರದಿಯಾಗಿರುವ ದೇವಾಲಯ ವಿರೂಪ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಬ್ರಿಟಿಷ್ ಕೊಲಂಬಿಯಾದ ಸರ್ರೆ ನಗರದಲ್ಲಿನ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹಾನಿ ಎಸಗಲಾಗಿದ್ದು ಗೋಡೆಯ ಮೇಲೆ ಭಾರತ ವಿರೋಧಿ, ಖಾಲಿಸ್ತಾನಿ ಪರ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಈ ದೇವಾಲಯದಲ್ಲಿ ಆಗಸ್ಟ್ 12ರಂದು ಕೂಡಾ ಇದೇ ರೀತಿಯ ಪೋಸ್ಟರ್ ಅಂಟಿಸಲಾಗಿತ್ತು.

ಅಲ್ಲದೆ ಸರ್ರೆ ನಗರದ ವಿವಿಧೆಡೆ ಅಂಟಿಸಲಾಗಿರುವ ಪೋಸ್ಟರ್ಗಳಲ್ಲಿ ಭಾರತದ ಗೃಹಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಫೋಟೋ ಇದ್ದು ಮೇಲ್ಗಡೆ `ವಾಂಟೆಡ್' ಎಂದು ಬರೆಯಲಾಗಿದೆ. ಈ ಪೋಸ್ಟರ್ಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.

ಇಂತಹ ಪೋಸ್ಟರ್ಗಳು ಸ್ವೀಕಾರಾರ್ಹವಲ್ಲ ಎಂದು ಭಾರತದ ಉನ್ನತ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಸೆಪ್ಟಂಬರ್ 10ರಂದು ಸರ್ರೆಯಲ್ಲಿ ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ ಎಂದು ಪ್ರತ್ಯೇಕತಾವಾದಿ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್' ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News