×
Ad

ಕೆನಡಾ | ಪಾಕ್ ಮೂಲದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ

Update: 2024-08-04 22:15 IST

ಸಾಂದರ್ಭಿಕ ಚಿತ್ರ

ಟೊರಾಂಟೊ : ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ಹತ್ಯೆಯನ್ನು ಖಂಡಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ್ ಮೂಲದ ರಾಹತ್ ರಾವ್ ಎಂಬವರನ್ನು ಕೆನಡಾದ ಸರ್ರೆಯಲ್ಲಿ ಸಜೀವ ದಹಿಸುವ ಪ್ರಯತ್ನ ನಡೆದಿದ್ದು ರಾವ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ರಾಹತ್ ರಾವ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐವ ಏಜೆಂಟ್ ಎಂಬ ವರದಿಯನ್ನು ಕೆನಡಾ ಪೊಲೀಸರು ನಿರಾಕರಿಸಿದ್ದಾರೆ. ಆದರೆ ನಿಜ್ಜಾರ್ ಹತ್ಯೆಯ ಬಳಿಕ ನಡೆದಿದ್ದ ಹಲವು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಸರ್ರೆಯಲ್ಲಿ ಈತನ ಮೇಲೆ ಸುಮಾರು 25 ವರ್ಷದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡಿರುವ ರಾವ್ ನನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News