×
Ad

ಕೆನಡಾ: ದೇವಸ್ಥಾನದ ಎದುರು ಖಾಲಿಸ್ತಾನ್ ಬೆಂಬಲಿಗರ ಪ್ರತಿಭಟನೆ

Update: 2023-11-26 22:24 IST

Photo Source - PTI

ಟೊರಂಟೊ: ಕೆನಡಾದ ಟೊರಂಟೋದಲ್ಲಿರುವ ಕಾಳಿಬಾರಿ (ಕಾಳಿದೇವಿ) ದೇವಸ್ಥಾನದ ಹೊರಗಡೆ ಪ್ರತಿಭಟನೆ ನಡೆಸಿದ ಖಾಲಿಸ್ತಾನ್ ಬೆಂಬಲಿಗರ ಗುಂಪು ದೇವಸ್ಥಾನದಲ್ಲಿದ್ದ ಆರಾಧಕರಿಗೆ ಅಡ್ಡಿಪಡಿಸಿದ್ದಾರೆ ಎಂದು ವರದಿಯಾಗಿದೆ.

ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸಿದ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ತಂಡ ಖಾಲಿಸ್ತಾನ್ ಧ್ವಜಗಳನ್ನು ಪ್ರದರ್ಶಿಸಿ ಭಾರತ ಸರಕಾರದ ವಿರುದ್ಧ ಘೋಷಣೆ ಕೂಗಿದರು. ದೇವಸ್ಥಾನದಲ್ಲಿದ್ದ ಹಿಂದುಗಳನ್ನು ಬೆದರಿಸಿದ ಗುಂಪು ಬಹಳ ಹೊತ್ತು ದೇವಸ್ಥಾನದ ಹೊರಗೆ ಗುಂಪು ಸೇರಿ ಘೋಷಣೆ ಕೂಗುತ್ತಿದ್ದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News