×
Ad

ಕೆನಡಾ: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

Update: 2024-02-12 22:04 IST

ಕುಲ್ದೀಪ್ ಸಿಂಗ್ | Photo:NDTV

ಒಟ್ಟಾವ: ಕೆನಡಾದ ಒಂಟಾರಿಯೊ ಪ್ರಾಂತದಲ್ಲಿ  ಭಾರತೀಯ ಮೂಲದ ಕುಲ್ದೀಪ್ ಸಿಂಗ್  ಎಂಬವರನ್ನು  ಹತ್ಯೆ ಮಾಡಲಾಗಿದ್ದು ಆತನ ಪುತ್ರನೇ ಈ ಕೃತ್ಯ ಎಸಗಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಹ್ಯಾಮಿಲ್ಟನ್ ನಗರದ ಮನೆಯೊಂದರಲ್ಲಿ ಗುಂಡಿನ ಸದ್ದು ಕೇಳಿಬಂದಿರುವುದಾಗಿ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಮನೆಯ ಮಾಲಕ 56 ವರ್ಷದ ಕುಲ್ದೀಪ್ ಸಿಂಗ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಿಂಗ್ 

ಹಾಗೂ ಅವರ ಪುತ್ರ 26 ವರ್ಷದ ಸುಖಾಜ್ ಸಿಂಗ್ ಚೀಮಾ ನಡುವೆ ಜಗಳವಾಗಿದ್ದು ಚೀಮಾ ತನ್ನ ತಂದೆಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವುದಾಗಿ ಸಿಸಿಟಿವಿ ದಾಖಲೆಗಳ ಪರಿಶೀಲನೆಯ ಬಳಿಕ  ಪೊಲೀಸರು ಹೇಳಿದ್ದಾರೆ. ಚೀಮಾನ ಭಾವಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಧಿಕಾರಿಗಳು ಆತನ ಸುಳಿವು ಸಿಕ್ಕರೆ  ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News