×
Ad

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ರಾಜೀನಾಮೆ ಸಾಧ್ಯತೆ

Update: 2025-01-06 11:14 IST

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ (PTI)

ಒಟ್ಟಾವ: ಇಂದು (ಸೋಮವಾರ) ಬೆಳಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಲಿಬರಲ್ ಪಾರ್ಟಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ಮೂರು ಮೂಲಗಳನ್ನು ಉಲ್ಲೇಖಿಸಿ The Globe ಹಾಗೂ Mail ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಜಸ್ಟಿನ್ ಟ್ರೂಡೊ ನಿಖರವಾಗಿ ಯಾವಾಗ ರಾಜೀನಾಮೆ ಸಲ್ಲಿಸುತ್ತಾರೆ ಎಂದು ನಮಗೆ ತಿಳಿದಿಲ್ಲ. ಆದರೆ, ಬುಧವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಸಭೆಗೂ ಮುನ್ನ ರಾಜೀನಾಮೆ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಆದರೆ, ಈ ಕುರಿತು ತಕ್ಷಣವೇ ಪ್ರತಿಕ್ರಿಯೆ ನೀಡಲು ಪ್ರಧಾನ ಮಂತ್ರಿ ಕಚೇರಿ ನಿರಾಕರಿಸಿದೆ ಎನ್ನಲಾಗಿದೆ. ಒಂದು ವೇಳೆ ಟ್ರೂಡೊ ತಮ್ಮ ಹುದ್ದೆಯನ್ನು ತಕ್ಷಣವೇ ತೊರೆಯಲಿದ್ದಾರೆಯೊ ಅಥವಾ ನೂತನ ನಾಯಕನ ಆಯ್ಕೆಯಾಗುವವರೆಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಯೊ ಎಂಬುದಿನ್ನೂ ಸ್ಪಷ್ಟವಾಗಿಲ್ಲ ಎಂದೂ ವರದಿಗಳು ಹೇಳಿವೆ.

2013ರಲ್ಲಿ ಲಿಬರಲ್ ಪಾರ್ಟಿಯು ತೀವ್ರ ಬಿಕ್ಕಟ್ಟಿನಲ್ಲಿದ್ದಾಗ ಹಾಗೂ ಹೌಸ್ ಆಫ್ ಕಾಮನ್ಸ್ ನಲ್ಲಿ ಮೂರನೆಯ ಸ್ಥಾನಕ್ಕೆ ಕುಸಿದಿದ್ದಾಗ ಜಸ್ಟಿನ್ ಟ್ರೂಡೊ ಲಿಬರಲ್ ಪಾರ್ಟಿಯ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News