×
Ad

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಕೆನಡಾ ಪ್ರಧಾನಿ ಟ್ರೂಡೊ ಘೋಷಣೆ

Update: 2025-01-16 20:54 IST

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (PTI)

ಟೊರಂಟೊ: ಮುಂಬರುವ ಫೆಡರಲ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಘೋಷಿಸಿದ್ದಾರೆ.

ಬುಧವಾರ ಒಟ್ಟಾವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರೂಡೊ `ನನ್ನ ಸ್ವಂತ ನಿರ್ಧಾರಗಳ ಪ್ರಕಾರ ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.

`ರಾಜಕೀಯ ಜೀವನದ ಬಳಿಕದ ಬದುಕಿನ ಬಗ್ಗೆ ನಾನಿನ್ನೂ ಯೋಚಿಸಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಆ ಬಗ್ಗೆ ಯೋಚಿಸಲು ನನಗೆ ಹೆಚ್ಚಿನ ಸಮಯವಿಲ್ಲ. ಕೆನಡಿಯನ್ನರು ನನ್ನನ್ನು ಆಯ್ಕೆ ಮಾಡಿದ ಉದ್ದೇಶವನ್ನು ಇದೀಗ ಸಂಪೂರ್ಣವಾಗಿ ಪೂರ್ಣಗೊಳಿಸುವ ಬಗ್ಗೆ ಗಮನ ಹರಿಸಿದ್ದೇನೆ ಎಂದು ಟ್ರೂಡೊ ಹೇಳಿದ್ದಾರೆ. ಈ ವರ್ಷದ ಅಕ್ಟೋಬರ್ ಗೆ ನಿಗದಿಯಾಗಿರುವ ಫೆಡರಲ್ ಚುನಾವಣೆ ಅದಕ್ಕೂ ಮುನ್ನವೇ ನಡೆಯುವ ಸಾಧ್ಯತೆಯಿದೆ. ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಜತೆ ವ್ಯವಹರಿಸಲು ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ತನ್ನ ಮತ್ತು ಕೆನಡಾದ ಪ್ರಾಂತಗಳ ಪ್ರೀಮಿಯರ್ ಗಳ ನಡುವೆ ನಡೆದ ಸಭೆಯ ಬಳಿಕ ಟ್ರೂಡೊ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News