ಭಾರತದ ಪ್ರದೇಶಗಳನ್ನು ಒಳಗೊಂಡ ನೇಪಾಳದ ನೋಟು ಚೀನಾದಲ್ಲಿ ಮುದ್ರಣ!
Update: 2024-10-31 22:37 IST
PC : NDTV
ಕಠ್ಮಂಡು : ದೇಶದ ಪರಿಷ್ಕೃತ ರಾಜಕೀಯ ನಕ್ಷೆಯನ್ನು ಒಳಗೊಂಡಿರುವ ಹೊಸ 100 ರೂಪಾಯಿ ನೋಟುಗಳನ್ನು ಮುದ್ರಿಸುವ ಗುತ್ತಿಗೆಯನ್ನು ನೇಪಾಳದ ಸೆಂಟ್ರಲ್ ಬ್ಯಾಂಕ್ ಚೀನಾದ ಸಂಸ್ಥೆಗೆ ವಹಿಸಿರುವುದಾಗಿ ವರದಿಯಾಗಿದೆ.
ಆಯಕಟ್ಟಿನ ಪ್ರದೇಶಗಳಾದ ಲಿಂಪಿಯಾಧುರಾ, ಲಿಪುಲೆಕ್ ಮತ್ತು ಕಾಲಾಪಾನಿಗಳನ್ನು ನೇಪಾಳದ ಭಾಗವಾಗಿ ಗುರುತಿಸಿರುವ ಹೊಸ 100 ರೂಪಾಯಿ ಕರೆನ್ಸಿ ನೋಟುಗಳ ವಿನ್ಯಾಸ ಬದಲಾವಣೆಯನ್ನು ನೇಪಾಳದ ಸಚಿವರ ಸಮಿತಿ ಅನುಮೋದಿಸಿದೆ. ನೇಪಾಳದ ಗಡಿಯ ಬಳಿ ಇರುವ ಈ ಮೂರೂ ಪ್ರದೇಶಗಳು ತನಗೆ ಸೇರಿದೆ ಎಂದು ಭಾರತ ಹೇಳಿದೆ.