×
Ad

ಚೀನಾ: ಜನರ ಮೇಲೆ ಹಲ್ಲೆಗೆ ಯತ್ನಿಸಿದ ರೊಬೊಟ್

Update: 2025-02-25 22:11 IST

ಸಾಂದರ್ಭಿಕ ಚಿತ್ರ | Pixabay

ಬೀಜಿಂಗ್: ಕೃತಕ ಬುದ್ಧಿಮತ್ತೆ(ಎಐ) ನಿಯಂತ್ರಣದ ರೊಬೊಟ್ ಒಂದರಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಜನರ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸಿದ ಘಟನೆ ಚೀನಾದಲ್ಲಿ ವರದಿಯಾಗಿದೆ.

ಚೀನಾದಲ್ಲಿ ನಡೆದ ಉತ್ಸವದಲ್ಲಿ ಎಐ ಚಾಲಿತ ರೊಬೊಟ್‍ಗಳ ತಂಡದ ಕಾರ್ಯಕ್ರಮ ಏರ್ಪಾಡಾಗಿತ್ತು. ಈ ವೇಳೆ ಒಂದು ರೊಬೊಟ್ ಏಕಾಏಕಿ ಜನರ ಗುಂಪಿನತ್ತ ನುಗ್ಗಿ ಹಲ್ಲೆ ನಡೆಸಲು ಪ್ರಯತ್ನಿಸಿದೆ. ತಕ್ಷಣ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ರೊಬೊಟ್ ಅನ್ನು ತಡೆದಿದ್ದಾರೆ. ರೊಬೊಟ್‍ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿರುವುದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News